ಹೂವನದಲಿ ಹೂವೆದೆಯಲಿ 

ಜೇನಾಗುವ ಬಯಕೆ...

ಅರಿವಿಲ್ಲದೇ ಅರಳುತಿಹ 

ಈ ಸ್ನೇಹ ಸಹವಾಸಕೆ.


ಸವಿ ಸ್ನೇಹದಿ ಹಗಲಿರುಳಲು 

ಹೂವಾಗಿರೊ ಈ ಪುಟ್ಟ ಹೃದಯಕೆ 

ತವರಂತಿಹ ನಿನ್ನ ಮಡಿಲಲಿ. ..

ಮಗುವಾಗಿರೊ ಬಯಕೆ .


ಆದರದ ಅಭಿಮಾನದಲಿ. ..

ಶಿರ ಭಾಗಿರೊ ಹೃದಯಕೆ...

ನಿನ್ನ ಮೊಗದಲಿ ಚಿರನೂತನ

ನಗುವಾಗಿರೋ ಬಯಕೆ. 


ಈ ಮನಸಿಗು ನಿನ್ನ ಕನಸಿನ 

ಜೊತೆ ಕೈಗೂಡಿಸೊ ಬಯಕೆ 

ನಿನ್ನ ಹೆಸರಿಗೆ ಉಸಿರಾಗಿರೊ 

ಈ ಮುಗ್ಧ ಹೃದಯಕೆ. 


ನಿನ್ನೊಲವಿನ ಜಲಧಾರೆಯಲಿ 

ಮಿಂದೇಳುವ ಬಯಕೆ. ..

ಈ ತನುವಿಗೂ ನಿನ್ನ ಪ್ರೇಮದ 

ತೀರದ ಬಾಯಾರಿಕೆ. ...! 


ಹೂವನದಲಿ ಹೂವೆದೆಯಲಿ. .....! -By ನಾಗರತ್ನ. ಎಂ. ಹೊಳ್ಳ (ಸುಮತಪಸ್ವಿನಿ) 

ನರಸಿಂಹರಾಜ ಪುರ

ಚಿಕ್ಕಮಗಳೂರು