ಇಂದೇಕೋ...ಅರಿಯದ. .ತಲ್ಲಣ...

ಮನದಲ್ಲಿ ಮುಗಿಯದ ತಳಮಳ. ..

ಭಾವನೆಗಳ ಲೋಕದಿಂದ ಬರವಣಿಗೆಯೆ ಬಾರದಲ್ಲ. ..!!

ಮನದಲ್ಲಿ ಯಾಕಿಂತಾ ವೇದನೇ. ..

ಲೇಖನಿಯನು ತಬ್ಬಿ ಕುಳಿತೇ. ..

ಹಾಗೇ..ಸುಮ್ಮನೇ.. (ಇಂದೇಕೋ )


ಸುರಿದಿಹ ವಾಗ್ಭಾಣಗಳು ಎದೆಯನೂ... .  ಸೀಳಿದೆ. ಮರೆತಿಹ ನೆನಪೂ ಬಂದು ಮನವನು ಅಳಿಸಿದೇ... 

ಮಳೇಬಿಲ್ಲೇ ಕಾಣೆಯಾಯಿತು ಕಣ್ಣ ನೀರ ಕಂಡೂ...

ಮಳೇ ಕೂಡ ಸ್ಥಬ್ಧಗೊಂಡಿತು ನನ್ನ ಹೀಗೆ ಕಂಡೂ...

ಮನದಲ್ಲೀ. .. ಯಾಕಿಂತಾ ರೋದನೆ...!!?

ಕಣ್ಣ ನೀರ ಒರೆಸುವರಿಲ್ಲ...ಕುಳಿತೇ ಸುಮ್ಮನೇ........(ಇಂದೇಕೋ )


ಸನಿಹವೇ ಸುಳಿದಿದೇ ಸವಿ ಸ್ನೇಹದ ಸುಳಿಯಿದೂ. .

ಕಂಡರೂ..ಕಾಣದೇ ಉಳಿದಿದೆ ಏತಕೇ ಕಂಗಳೂ...

ಮೌನದಾ ಮಾತನೂ. . ಆಲಿಸು

ಎಂದಿದೇ ಮನವಿದು...

ಮೌನದ ಸೆರೆಮನೆ ಸೇರುತಿದೆ

ಕಂಡ ಕನಸುಗಳು ಇಂದೂ...

ಮನದಲ್ಲೀ...ಯಾಕಿಂತಾ ಭಾವನೇ. ..

ಮೂಕ ಹಕ್ಕಿಯ ಹಾಡು ಇಂದೂ...

ಹಾಗೇ..ಸುಮ್ಮನೇ..(ಇಂದೇಕೋ )


ಮನದಾ ಮನೆಯಲೀ ಕವಿಯಿತು ಇರುಳಿನ ಕತ್ತಲೂ. .. 

ಆಡದೇ ಉಳಿದಿಹ ಮಾತಿಗೆ ತೊಡಿಸುತ ಮೌನದ ಬೇಡಿಯ...

ಅಸೂಯೆಯ ಸಂಚಿದು ಬೇಡಿದೆ 

ಹೊಸ ಸ್ನೇಹದ ಬಲಿಯನೂ. .. 

ಮುಗ್ಧ ಮನವಿದು ಹಾಡುತಿದೇ. ..

ನೊಂದ ವಿರಹ ಗೀತೆ....

ಕಣ್ಣು ಮುಚ್ಚಿ ಕುಳಿತೆ ಒಮ್ಮೇ...ಹಾಗೇ...ಸುಮ್ಮನೇ... 


ಇಂದೇಕೋ  ಅರಿಯದ ತಲ್ಲಣ...!!


- By ನಾಗರತ್ನ.ಎಂ.ಹೊಳ್ಳ (ಸುಮತಪಸ್ವಿನಿ) 

ನರಸಿಂಹ ರಾಜಪುರ,

ಚಿಕ್ಕಮಗಳೂರು