ಮೈಸೂರು ಮೃಗಾಲಯಕ್ಕೆ ಹೊಸದಾಗಿ ಮೂರು ದೇಶಗಳಿಂದ ಎರಡು ಗೊರಿಲ್ಲಾ, ನಾಲ್ಕು ಒರಂಗುಟಾನ್ ನರವಾನರರ ಆಗಮನ ಆಗಿದ್ದು, ಇಂದು ಅಲ್ಲಿ ಹಬ್ಬದ ವಾತಾವರಣ ಕಂಡು ಬಂತು.
ಜರ್ಮನಿಯಿಂದ 4ರ ತಾಬೋ, 8ರ ಡಂಬ ಎಂಬ ಗೊರಿಲ್ಲಾಗಳು, ಮಲೇಶಿಯಾದಿಂದ 5 ವರುಷದ ಅಪಾ, 7ರ ಮಿನ್ನಿ, ಸಿಂಗಾಪುರದಿಂದ 17ರ ಮೆಲ್ವಿನ್, 13ರ ಪ್ರಾಯದ ಅಟಿನಾ ಬಂದಿದ್ದು, ಅವರಿಗೆ ಭಾರೀ ಸ್ವಾಗತ ದೊರೆಯಿತು.