ಜೆಡಿಎಸ್ ಪಕ್ಷವನ್ನು ಬಿಜೆಪಿಯ ಉಸ್ತುವಾರಿ ಅರುಣ್ ಸಿಂಗ್ ಮುಳುಗುವ ಹಡಗು ಎಂದಿದ್ದಾರೆ. ಹೀಗಿರುವಾಗ ಬೊಮ್ಮಾಯಿಯವರ ಸರಕಾರ ಮುಳುಗಬಹುದಾದ್ದರಿಂದ ಮೈತ್ರಿ ಕಷ್ಟ ಎಂದು ಮಾಜೀ ಮಂತ್ರಿ ಶಾಸಕ ಎಚ್. ಡಿ. ರೇವಣ್ಣ ಹೇಳಿದರು.

ಮುಳುಗಿದರೆ ಮೇಲೆ ಬರಲು ನಮ್ಮ ಬಳಿ ಜಲಾಂತರ್ಗಾಮಿ ಇದೆ. ಏನೇ ಇದ್ದರೂ ಕಲಬುರಗಿ ಪಾಲಿಕೆಯಲ್ಲಿ ಮೈತ್ರಿ ಬಗೆಗೆ ಎಚ್. ಡಿ. ದೇವೇಗೌಡ ಅವರು ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನ ಮಾಡುವರು ಎಂದು ರೇವಣ್ಣ ತಿಳಿಸಿದರು.