ಆಟೋ ರಾಜ, ನಾ ನಿನ್ನ ಬಿಡಲಾರೆ, ಪಾವನ ಗಂಗಾ ಮೊದಲಾದ ಚಿತ್ರಗಳ ನಿರ್ದೇಶಕ ಸಿ. ಜಯರಾಂ ಗುರುವಾರ ಬೆಳಿಗ್ಗೆ ನಿಧನರಾದರು.

ಯಶಸ್ವಿ ನಿರ್ದೇಶಕರಾಗಿದ್ದ ಅವರು ನಿರ್ಮಾಪಕರೂ ಆಗಿದ್ದರು. ಅವರ ಅಂತ್ಯಕ್ರಿಯೆ 12 ಗಂಟೆಯ ಹೊತ್ತಿಗೆ ಬೆಂಗಳೂರಿನ ಸುಮನಹಳ್ಳಿಯಲ್ಲಿ ನಡೆಯಿತು.

ಜಯರಾಂ ಅವರ ಮಗ ಮಿಲನ ಪ್ರಕಾಶ್ ಸಹ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ.