ಸುಳ್ಯ ತಾಲೂಕಿನ ಗುತ್ತಿಗಾರು ಮೊಗ್ರ ಏರಣ ಗುಡ್ಡೆಯ ತಂದೆ ಮಗ ಕ್ಷುಲ್ಲಕ ಕಾರಣಕ್ಕೆ ಜಗಳ ಆಡಿದ್ದು ಮಗನ ಕೊಲೆಯಲ್ಲಿ ಕೊನೆಗಂಡಿದೆ. ಕೊಲೆಯಾದ ಮಗ 35ರ ಶಿವರಾಮ. ಸುಬ್ರಮಣ್ಯ ಪೋಲೀಸರು ಮಗನ ಕೊಲೆ ಸಂಬಂಧ ತಂದೆ ಶೀನಪ್ಪರನ್ನು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ತಡವಾಗಿ ಮನೆಗೆ ಬಂದ ಮಗ ಶಿವರಾಮ ಅಷ್ಟೊಂದು ಕೋಳಿ ಪಲ್ಯ ಇದ್ದದ್ದು ಕಾಲಿ ಆದದ್ದು ಹೇಗೆ ಎಂದು ಜಗಳ ಆಡಿದ್ದಾನೆ. ಜಗಳ ಜೋರಾದಾಗ ತಂದೆ ಶೀನಪ್ಪ ಒಂದು ಬಡಿಗೆಯಿಂದ ತಲೆಗೆ ಹೊಡೆದಿದ್ದಾನೆ. ಕೆಳಗೆ ಬಿದ್ದ ಶಿವರಾಮ ಸ್ಥಳದಲ್ಲೇ ಮೃತನಾಗಿದ್ದಾನೆ.