ಟೋಕಿಯೋ ಪ್ಯಾರಾಲಿಂಪಿಕ್ಸ್ 2020 ಹೆಸರಿನಲ್ಲಿಯೇ ನಡೆಯುತ್ತಿದ್ದು, 86 ದೇಶಗಳು ಈಗಾಗಲೇ ಪದಕ ಪಟ್ಟಿಯಲ್ಲಿ ತಮ್ಮ ಹೆಸರು ಬೆಳಗಿಸಿವೆ.

95 ಚಿನ್ನದೊಂದಿಗೆ 206 ಪದಕ ಪಡೆದ ಚೀನಾ, 41 ಬಂಗಾರದ ಸಹಿತ 123 ಪದಕ ಪಡೆದ ಬ್ರಿಟನ್, 36 ಸ್ವರ್ಣದೊಡನೆ 103 ಪದಕ ಹಿಡಿದ ಯುಎಸ್‌ಎ, 36 ಕನಕ ಸಹಿತ 118 ಪದಕ ಒಗ್ಗೂಡಿಸಿರುವ ರಶಿಯಾ, 25 ಬಂಗಾರ ಸೇರಿ 59 ಪದಕ ಗಳಿಸಿರುವ ನೆದರ್‌ಲ್ಯಾಂಡ್ಸ್, 24 ಸುವರ್ಣದೊಡನೆ 98 ಪದಕ ಗೆದ್ದ ಉಕ್ರೇನ್‌, 22 ಚಿನ್ನದೊಂದಿಗೆ 72 ಪದಕ ಗೆದ್ದ ಬ್ರೆಜಿಲ್‌, 21 ಬಂಗಾರ ಸಮೇತ 80 ಪದಕ ಸೇರಿಸಿದ ಆಸ್ಟ್ರೇಲಿಯಾಗಳು ಮೆಡಲ್ ಟೇಬಲಿನ ಮೊದಲ ಎಂಟು ಸ್ಥಾನಗಳಲ್ಲಿ ಇವೆ.

ಇಟೆಲಿ, ಅಜರ್‌ಬೈಜಾನ್, ಜಪಾನ್ ಮುಂದಿನ 11ರವರೆಗಿನ ಸ್ಥಾನಗಳನ್ನು ಕ್ರಮವಾಗಿ ತುಂಬಿವೆ.

ಭಾರತವು 4 ಚಿನ್ನ, 8 ಬೆಳ್ಳಿ, 6 ಕಂಚು ಸಹಿತ 18 ಪದಕದೊಂದಿಗೆ ಪದಕ ಪಟ್ಟಿಯ 27ನೇ ಸ್ಥಾನದಲ್ಲಿದೆ.