ಟೋಕಿಯೋ ಪ್ಯಾರಾಲಿಂಪಿಕ್ಸ್ 2020 ಹೆಸರಿನಲ್ಲಿಯೇ ನಡೆಯುತ್ತಿದ್ದು, 73 ದೇಶಗಳು ಈಗಾಗಲೇ ಪದಕ ಪಟ್ಟಿಯಲ್ಲಿ ತಮ್ಮ ಹೆಸರು ಬೆಳಗಿಸಿವೆ.

47 ಚಿನ್ನದೊಂದಿಗೆ 105 ಪದಕ ಪಡೆದ ಚೀನಾ, 24 ಬಂಗಾರದ ಸಹಿತ 64 ಪದಕ ಪಡೆದ ಬ್ರಿಟನ್, 15 ಸ್ವರ್ಣದೊಡನೆ 41  ಪದಕ ಹಿಡಿದ ಯುಎಸ್‌ಎ, 15 ಕನಕ ಸಹಿತ 53 ಪದಕ ಒಗ್ಗೂಡಿಸಿರುವ ರಶಿಯಾಗಳು‌ ಮೆಡಲ್ ಟೇಬಲಿನ ಮೊದಲ ನಾಲ್ಕು ಸ್ಥಾನಗಳಲ್ಲಿ ಇವೆ.

ಉಕ್ರೇನ್, ಬ್ರೆಜಿಲ್, ಅಜರ್‌ಬೈಜಾನ್, ಆಸ್ಟ್ರೇಲಿಯಾ, ಇಟೆಲಿ, ನೆದರ್ಲ್ಯಾಂಡ್ಸ್  ಮುಂದಿನ 10ರವರೆಗಿನ ಸ್ಥಾನಗಳನ್ನು ಕ್ರಮವಾಗಿ ತುಂಬಿವೆ.

ಭಾರತವು ಪದಕ ಪಟ್ಟಿಯ 45ನೇ ಸ್ಥಾನದಲ್ಲಿದೆ.