ಟೋಕಿಯೋ ಪ್ಯಾರಾಲಿಂಪಿಕ್ಸ್ 2020 ಹೆಸರಿನಲ್ಲಿಯೇ ನಡೆಯುತ್ತಿದ್ದು, 40 ದೇಶಗಳು ಈಗಾಗಲೇ ಪದಕ ಪಟ್ಟಿಯಲ್ಲಿ ತಮ್ಮ ಹೆಸರು ಬೆಳಗಿಸಿವೆ.

8 ಚಿನ್ನದೊಂದಿಗೆ 24 ಪದಕ ಪಡೆದ ಚೀನಾ, 7 ಬಂಗಾರದ ಸಹಿತ 15 ಪದಕ ಪಡೆದ ಆಸ್ಟ್ರೇಲಿಯಾ, 6 ಸ್ವರ್ಣದೊಡನೆ 17 ಪದಕ ಪಡೆದಿರುವ ಬ್ರಿಟನ್, 6 ಕನಕ ಸಹಿತ 17 ಪದಕ ಒಗ್ಗೂಡಿಸಿರುವ ರಶಿಯಾಗಳು‌ ಮೆಡಲ್ ಟೇಬಲಿನ ಮೊದಲ ನಾಲ್ಕು ಸ್ಥಾನಗಳಲ್ಲಿ ಇವೆ.

ನೆದರ್ಲ್ಯಾಂಡ್ಸ್, ಇಟೆಲಿ, ಬ್ರೆಜಿಲ್, ಯುಎಸ್‌ಎ, ಬೆಲಾರಸ್, ಉಕ್ರೇನ್ 10ರವರೆಗಿನ ಸ್ಥಾನಗಳನ್ನು ಕ್ರಮವಾಗಿ ತುಂಬಿವೆ.