ಟೋಕಿಯೋದ ಕಾಲಿ ಕ್ರೀಡಾಂಗಣದಲ್ಲಿ ಜಪಾನಿನ ಅರಸು ನರುಹಿಟೊ ಅವರು ವೀ  ಹ್ಯಾವ್ ವಿಂಗ್ಸ್ ಎಂಬ ಧ್ಯೇಯ ವಾಕ್ಯದೊಡನೆ ವಿಶೇಷ ಚೇತನರ ಒಲಿಂಪಿಕ್ಸ್‌ಗೆ ಚಾಲನೆ ನೀಡಿದರು.

ಭಾರತ ಸಹಿತ ಭಾಗವಹಿಸುವ 162 ದೇಶಗಳ ಬಾವುಟಗಳು‌ ಹಾರಾಡಿದವು. ಕೆಲವೇ ಕೆಲವು ಜನರಲ್ಲಿ ಯಾರೋ ಒಬ್ಬರು ಅಫಘಾನಿಸ್ತಾನದ ಧ್ವಜ ಎತ್ತಿ ‌ಹಿಡಿದದ್ದು ಕಂಡು ಬಂತು. ಮಿತಿಯಲ್ಲಿ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.