ಮಂಗಳೂರು : ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಜುಲೈ 11ನೇ ಭಾನುವಾರ ಸಂಜೆ ಆರು ಗಂಟೆಗೆ ಮಂಗಳೂರಿನಲ್ಲಿ 'ಕಾವ್ಯ ಸಿಂಧೂರ' ಎಂಬ ವಿಶ್ವ ಮಹಿಳಾ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜನಪ್ರಿಯ ಕವಯಿತ್ರಿ ಅಂಕಣ ಬರಹಗಾರ್ತಿ ವಿಜಯಲಕ್ಷ್ಮೀ ಕಟೀಲು ವಹಿಸಲಿದ್ದಾರೆ. ಗೂಗಲ್ ಮೀಟ್ ವೆಬಿನಾರ್ ಮೂಲಕ 'ನಂಜನಗೂಡು ತಿರುಮಲಾಂಬ' ವೇದಿಕೆಯಲ್ಲಿ ನಡೆಯುವ ಈ ಮಹಿಳಾ ಕವಿಗೋಷ್ಠಿಯಲ್ಲಿ ಅಮೆರಿಕಾದ ಮೇರಿಲ್ಯಾಂಡ್ ನಿಂದ ಫಣಿಶ್ರೀ ನಾರಾಯಣನ್, ಮುಂಬೈ ನಿಂದ ಶಾರದಾ ಎ. ಅಂಚನ್, ಅಕ್ಷಯ ಆರ್ ಶೆಟ್ಟಿ, ಮಂಗಳೂರು,ಪಾರ್ವತಿ ಜೋರಾಪುರ್ ಮಠ್, ವಿಜಯಪುರ, ನವಿ ಮುಂಬೈ ನಿಂದ ರಶ್ಮಿ ಭಟ್ ಕಾಘರ್, ಹೆಸರಾಂತ ವಾಗ್ಮಿ ಸಾಹಿತಿ ಡಾ.ಶುಭಾ ಮರವಂತೆ, ಯುವ ಕವಯಿತ್ರಿ ಶಮೀಮಾ ಕುತ್ತಾರ್, ಹಿರಿಯ ಕವಿಯಿತ್ರಿ ಮರೋಳಿ ಸಬೀತಾ ಕಾಮತ್, ಪತ್ರಕರ್ತೆ ಲೇಖಕಿ ವಿದ್ಯಾ ಗಣೇಶ್ ಕಾಸರಗೋಡು, ಹಲವು ಪುರಸ್ಕಾರಗಳನ್ನು ಪಡೆದಿರುವ ಕವಯಿತ್ರಿ ಕಾತ್ಯಾಯಿನಿ ಕುಂಜಿಬೆಟ್ಟು, ಹಿರಿಯ ಸಾಹಿತಿ ಸತ್ಯವತಿ ಭಟ್ ಕೊಳಚಪ್ಪು, ಲೇಖಕಿ ನಳಿನಾಕ್ಷಿ ಉದಯರಾಜ್ಶಿ ಕ್ಷಕಿ ಕವಯಿತ್ರಿ ಸುಪ್ರಿಯ ಮಂಗಳೂರು, ನಿರ್ಮಲಾ ಶೇಷಪ್ಪ ಖಂಡಿಗೆ, ಸಾಹಿತಿ ಮಲ್ಲಿಕಾ ಜೆ ರೈ ಪುತ್ತೂರು, ಲೇಖಕಿ ಶೈಲಜಾ ಪುದುಕೋಳಿ,ಹೈದರಾಬಾದ್ ನಿಂದ ವಿಜಯಲಕ್ಷ್ಮೀ ಅಶೋಕ್ ಬಸವ,  ಎನ್. ಆರ್. ರೂಪಶ್ರೀ ಮೈಸೂರು, ಅಸುಂತಾ ಡಿಸೋಜಾ ಮಂಗಳೂರು ಮತ್ತು ವಿದ್ಯಾರ್ಥಿನಿ ವೈಭವಿ ಸುರತ್ಕಲ್ ಹೀಗೆ ಒಟ್ಟು ಆಹ್ವಾನಿತ 20 ಮಂದಿ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದ್ದಾರೆ.

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಆಶಯ ಭಾಷಣ ಮಾಡುವರು.

ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಅವರು ಭಾಗವಹಿಸುವರು.

ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು  ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಹೆಸರಾಂತ ನಿರೂಪಕಿ ಡಾ.ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸುವರು  ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.