ಉಡುಪಿ, ಜ 20: ಬ್ರಹ್ಮಾವರ ತಾಲೂಕು ಕೃಷಿಕ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಚುನಾವಣಾ ಪ್ರಕ್ರಿಯೆಯು ಇತ್ತೀಚೆಗೆ ಉಡುಪಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದಿದ್ದು, ಅಧ್ಯಕ್ಷರಾಗಿ ಪಿ.ವೈಕುಂಠ ಹೇರ್ಳೆ, ಉಪಾಧ್ಯಕ್ಷರಾಗಿ ಸುದರ್ಶನ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಕಾಮತ್, ಖಜಾಂಜಿಯಾಗಿ ಉಮಾಕಾಂತ್ ಕಾಮತ್ ಮತ್ತು ಜಿಲ್ಲಾ ಪ್ರತಿನಿಧಿಯಾಗಿ ಪ್ರದೀಪ್ ಹೆಬ್ಬಾರ್ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಬ್ರಹ್ಮಾವರ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.
