ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವನಮಹೋತ್ಸವ ಮತ್ತು ಹನಿ ಇಬ್ಬನಿ ಸಿಹಿ ಸಿಂಚನ ಮುಂಗಾರು ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವನ್ನು ಸ್ಥಳೀಯ ಲಾಲ್‌ಬಾಗ್‌ನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ನಡೆಸಿತು.
ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಜಿಲ್ಲಾಧ್ಯಕ್ಷರಾದ ಪಿ. ಬಿ. ಹರೀಶ್ ರೈಯವರು ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಮಾಜಿ ಮೇಯರ್ ದಿವಾಕರ್ ಕದ್ರಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ ವನಮಹೋತ್ಸವಕ್ಕೆ ಚಾಲನೆ ನೀಡಿ ಇದರ ಮಹತ್ವದ ಕುರಿತು ಮಾತನಾಡಿದರು. ಗೌರವ ಅತಿಥಿಯಾಗಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷರಾದ ಭಾಸ್ಕರ್ ರೈ ಕಟ್ಟ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಗುಣಾಜೆ ರಾಮಚಂದ್ರ ಭಟ್, ಡಾ. ಸುರೇಶ ನೆಗಳಗುಳಿ, ರೇಮಂಡ್ ಡಿಕೂನ ತಾಕೊಡೆ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಎಂ. ಎಸ್. ವೆಂಕಟೇಶ ಗಟ್ಟಿ, ಚೇತನ್, ವೈಭವ್ ಡಿ. ಶೆಟ್ಟಿಗಾರ್, ಪ್ರೇಮ ಆರ್. ಶೆಟ್ಟಿ, ಡಾ. ಕವಿತಾ, ಪದ್ಮನಾಭ ಪೂಜಾರಿ ಬಂಟ್ವಾಳ, ಫ್ಲಾವಿಯ ಅಲ್ಬುಕರ್ಕ್, ಅಶ್ವಿನಿ ಕುರ್ನಾಡ್ ತೆಕ್ಕುಂಜ, ನಿಶಾನ್ ಅಂಚನ್, ಸಲೀಂ ಪಾಷಾ, ಮನ್ಸೂರ್ ಮೂಲ್ಕಿ, ಪ್ರಶಾಂತ್ ಎನ್. ಆಚಾರ್ಯ, ಭವ್ಯಜ್ಯೋತಿ ಕೆ. ವಿಟ್ಲ, ಅನಿತಾ ಶೆಣೈ, ಮರ್ಲಿನ್ ಮೇಬೆಲ್ ಮೆಸ್ಕರೇನಸ್, ಲಕ್ಷ್ಮೀ ವಿ. ಭಟ್, ಸುಲೋಚನಾ ನವೀನ್, ಅನನ್ಯ ಎಚ್. ಸುಬ್ರಹ್ಮಣ್ಯ, ಲಾವಣ್ಯ, ದಿವ್ಯಾ ಗಿರೀಶ್, ಆಕಾಶ್ ಗೇರುಕಟ್ಟೆ, ಅನನ್ಯ ಕರ್ಕೇರ, ಡಾ. ಫ್ಲಾವಿಯ ಕ್ಯಾಸ್ಟಲಿನೋ, ಜಯಶ್ರೀ ಮುರಗೋಡ ಮತ್ತು ಗೀತಾ ಲಕ್ಷ್ಮೀಶ್ ತುಳು, ಕನ್ನಡ, ಕೊಂಕಣಿ, ಹಿಂದಿ, ಹವ್ಯಕ್, ಅರೆಭಾಷೆಗಳಲ್ಲಿ ಕವನಗಳನ್ನು ವಾಚಿಸಿದರು.
ಕವಿ ಗೋಷ್ಟಿಯ ಅಧ್ಯಕ್ಷತೆಯನ್ನು ಹಿರಿಯ ಕವಿ ಡಾ. ವಸಂತಕುಮಾರ್ ಪೆರ್ಲ ವಹಿಸಿ ಕಾಲಕಾಲಕ್ಕೆ ಕನ್ನಡ ಕಾವ್ಯವು ತನ್ನ ಸ್ವರೂಪವನ್ನು ಬದಲಿಸುತ್ತ, ಆಯಾ ಕಾಲದ ಅಂತಃಸತ್ವವನ್ನು ಉಳಿಸಿಕೊಂಡು ಬಂದುದನ್ನು ಸೋದಾಹರಣವಾಗಿ ತಿಳಿಸಿಕೊಟ್ಟರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿಯ ಸಾಹಿತ್ಯಕೂಟ ಪ್ರಮುಖ್ ಗೀತಾ ಲಕ್ಷ್ಮೀಶ್ ಕಾರ್ಯಕ್ರಮವನ್ನು ಸಂಯೋಜಿಸಿ, ನಿರ್ವಹಿಸಿದರು.