ಮಂಗಳೂರು: ಚುನಾವಣೆ ಬಂದಾಗ ದೇಶಭಕ್ತ ಸಂಘಟನೆ ಆರ್‍ಎಸ್‍ಎಸ್ ಮೇಲೆ ಕಾಂಗ್ರೇಸ್ ಹಾಗೂ ಜೆಡಿಎಸ್ ಟೀಕೆ ಮಾಡುತ್ತಿರುವುದನ್ನು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ ಖಂಡಿಸಿದ್ದಾರೆ. ಆರ್‍ಎಸ್‍ಎಸ್ ದೇಶಭಕ್ತ ಸ್ವಯಂಸೇವಕರ ಸಂಘಟನೆಯಾಗಿದ್ದು ಕಳೆದ 96 ವರ್ಷಗಳಿಂದ ವ್ಯಕ್ತಿ ನಿರ್ಮಾಣದ ಕಾರ್ಯ ಮಾಡುತ್ತಿದೆ. ಸ್ವಯಂಸೇವಕರು ರಾಜಕೀಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣ ಕತೆಯಿಂದ ಕೆಲಸ ಮಾಡುತ್ತಿರುವುದು ಸತ್ಯ. ಆದರೆ ಪ್ರದಾನ ಮಂತ್ರಿ, ಮುಖ್ಯ ಮಂತ್ರಿ ಅಥವಾ ಬಿಜೆಪಿ ಆರ್‍ಎಸ್‍ಎಸ್ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದೆಂಬ ಸಿದ್ದರಾಮಯ್ಯನವರ ಹೇಳಿಕೆ ಮೂರ್ಖತನದ ಪರಮಾವಧಿ. ಸಂಘದ ಕಾರ್ಯಕ್ಕೆ ಒಂದು ಇಂಚು ಜಾಗ ಕೊಡುವುದಿಲ್ಲ ಎಂದು ಹೇಳಿರುವ ನೆಹರೂರವರು ಸಂಘದ ಸೇವಾಕಾರ್ಯಕ್ಕೆ ಮನಸೋತು ಗಣರಾಜ್ಯೋತ್ಸವದ ಪೇರೇಡ್‍ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವುದನ್ನು ತಾವು ಮರೆತಿದ್ದೀರಿ.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ
(File Photo)
ಕುಮಾರ ಸ್ವಾಮಿಯವರ ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿ ಕಾಣುತ್ತಿದೆ, ರಾಮಮಂದಿರಕ್ಕೆ ಸಂಗ್ರಹಣವಾಗಿದ್ದು ಹಣವಲ್ಲ ಭಕ್ತರ ಭಕ್ತಿಯ ಕಾಣ ಕೆ. ಅದರ ಲೆಕ್ಕ ಬಿಜೆಪಿ ಅಥವಾ ಆರ್‍ಎಸ್‍ಎಸ್‍ನಲ್ಲಿ ಕೇಳಿದರೆ ಸಿಗುವುದಿಲ್ಲ ಅಯೋದ್ಯೆಗೆ ಹೋಗಿ ರಾಮಮಂದಿರ ನಿರ್ಮಾಣದ ಟ್ರಸ್ಟ್‍ನಲ್ಲಿ ಕೇಳಿದರೆ ಸಿಗುತ್ತದೆ. ಹಿಂದಿನ ಹಾಗೂ ಈಗಿನ ಆರ್‍ಎಸ್‍ಎಸ್‍ನಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಈಗ ಸಂಘಟನೆ ಬಲಿಷ್ಟವಾಗಿ ವಿಸ್ತರಣೆಗೊಂಡಿದೆ. ಸಂಘದ ವಿಚಾರದಾರೆ ಬೇರೆಯಲ್ಲ ಈ ದೇಶದ ವಿಚಾರದಾರೆ ಬೇರೆಯಲ್ಲ. ಸಂಘವನ್ನು ಈ ದೇಶದ ಜನತೆ ಸ್ವೀಕರಿಸಿದರಿಂದ ಸ್ವಯಂಸೇವಕರು ದೇಶದ ಅತ್ಯುನ್ನತ ಹುದ್ದೆಗಳಿಗೆ ನ್ಯಾಯ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಮುಂದೆ ಮಾತನಾಡಿದ ಅವರು ಬಾಂಗ್ಲಾ ದೇಶದಲ್ಲಿ ನವರಾತ್ರಿಯ ವಿಶೇಷ ದುರ್ಗಾ ಪೂಜೆಯ ಹಬ್ಬದ ಸಂದರ್ಭದಲ್ಲಿ ಹಿಂದೂ ಸಮುದಾಯಗಳ ಮೇಲೆ ಮತಾಂದ ಮುಸ್ಲಿಂ ಸಂಘಟನೆಗಳು ದಾಳಿ ಮಾಡಿರುವುದು ಖಂಡನೆಗೆ ಪಾತ್ರವಾದದ್ದು, ಹಲವಾರು ವರ್ಷಗಳಿಂದ ಬಾಂಗ್ಲಾ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿ ಎರಡನೇ ದರ್ಜೆ ಪ್ರಜೆಗಳಾಗಿ ಬದುಕುತ್ತಿದ್ದಾರೆ. ಹಿಂದೂಗಳನ್ನು ಕಂಡಲ್ಲಿ ಕೊಲ್ಲಿ ಎಂಬ ಪ್ರಚಾರ ಮಾಡಲಾಗುತ್ತಿದೆ ಹಿಂದೂ ದೇವಾಲಯಗಳ ದ್ವಂಸವಾಗುತ್ತಿದೆ, ಮನೆಗೆ ಬೆಂಕಿ ಹಚ್ಚುವುದರಿಂದ ಹಿಂದೂಗಳು ನಿರಾಶ್ರಿತರಾಗಿದ್ದಾರೆ. ಹಿಂದೂಗಳ ಪಾಲಿಗೆ ನರಕ ಸದೃಶವಾಗಿದೆ. ಬಾಂಗ್ಲಾ ಸರಕಾರ ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅಗ್ರಹಿಸಿದ್ದಾರೆ.