ನನ್ನ ದೇಶ, ನನ್ನ ಭಾಷೆ |ನನ್ನ ಉಸಿರು ಭಾರತ ||ಸುತ್ತ ನೀರು, ನಡುವೆ ಹಸಿರು |
ಮೇಲೆ ಧವಳ ಪರ್ವತ
ನಾವು ಭಾರತೀಯರು....

ಕ್ರಾಂತಿ ಬೇಡಾ ಶಾಂತಿ ಇರಲಿ
ಎಂದವರು ಗಾಂಧಿ ತಾತ,
ಎಲ್ಲ ಮತವು ನಮ್ಮದೆಂದು ಬಾಳಿ
ಚಂದ ಕೂಡುತ,
ನಾವು ಭಾರತೀಯರು...

ಹಲವು ಬಗೆಯ ಭಾಷೆಯು,
ನೂರು ತರದ ವೇಷವು,
ಎಲ್ಲಾ ಸೇರಿ ಬಂದವು,
ಮೂರು ಬಣ್ಣ ಆದವು,
ನಮ್ಮ ಹೆಮ್ಮೆ ಬಾವುಟ...
ನಾವು ಭಾರತೀಯರು
ನಾವು ಭಾರತೀಯರು.

- ನಾಗೇಶ್ ಗಡಿಗೇಶ್ವರ