ಟ್ಯುನೀಸಿಯಾದ ಆನ್ ಜುಬೆವುರ್ ಅವರು ಇಗಾ ಸ್ವೆಟೆಕ್‌ರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪುವ ಮೂಲಕ ಈ ಸಾಧನೆ ಮಾಡಿದ ಮೊದಲ ಅರಬ್ ಮಹಿಳೆ ಎನಿಸಿದರು.
ಮೂವರು ಗ್ರಾನ್‌ಸ್ಲಾಮ್ ವಿಜೇತೆಯರನ್ನು ಸೋಲಿಸಿ ಬಂದ ಜುಬೆವುರ್ ಸಾಧನೆ ಅದ್ಭುತ. ವೀನಸ್ ವಿಲಿಯಮ್ಸ್, ಗಾರ್ಬೇನ್ ಮುಗುರುಜರನ್ಮು ಹಿಂದಿನ ಹಂತಗಳಲ್ಲಿ ಸೋಲಿಸಿರುವ ಜುಬೆವುರ್ ಈಗ ಕಳೆದ ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ಇಗಾ ಸ್ವೆಟೆಕ್‌ರನ್ನು ಸೋಲಿಸಿದ್ದಾರೆ.
ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಆ ದೇಶದ ಪರ ಎಂಟರ ಘಟ್ಟ ಪ್ರವೇಶಿಸಿದ ಮೊದಲ ಮಹಿಳೆ ಎನಿಸಿದರು. ಬೆರೆಟ್ಟಿನಿ ಮೂಲಕ ಇಟೆಲಿಯವರೊಬ್ಬರು 23 ವರುಷಗಳ ಬಳಿಕ ಎಂಟರ ಘಟ್ಟ ಕಂಡಂತಾಗಿದೆ.