ಯೂರೋಪಿಯನ್ ಫುಟ್ಬಾಲ್ ಚಾಂಪಿಯನ್‌ಶಿಪ್ ಫೈನಲ್ ಈ ಬಾರಿ ಇಂಗ್ಲೆಂಡ್ ಮತ್ತು ಇಟೆಲಿ ನಡುವೆ ನಡೆಯಲಿದೆ. ಅನಿರೀಕ್ಷಿತವೇನೂ ಕಂಡು ಬರಲಿಲ್ಲ.
ಅಂತಿಮ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು ಡೆನ್ಮಾರ್ಕ್ ತಂಡವನ್ನು 2- 1 ಗೋಲುಗಳಿಂದ ಸೋಲಿಸಿತು. ಅದಕ್ಕೆ ಮೊದಲು ಫೇವರಿಟ್ ತಂಡಗಳಲ್ಲಿ ಒಂದಾದ ಸ್ಪೆಯಿನನ್ನು ಇಟೆಲಿ ಸೋಲಿಸಿ ಫೈನಲಿಗೇರಿತ್ತು.
ಇಟೆಲಿಯ 1,000 ಫುಟ್ಬಾಲ್ ಅಭಿಮಾನಿಗಳಿಗೆ ಭಾನುವಾರದ ಫೈನಲ್ ನೋಡಲು ಅವಕಾಶ ಮಾಡಿಕೊಡುವುದಾಗಿ ಇಂಗ್ಲೆಂಡ್ ಆಡಳಿತ ಹೇಳಿದೆ.