ಜನವರಿ 31ರವರೆಗೆ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಮುಂದುವರಿಯಲಿದ್ದು, ಆ ಮರುದಿನದಿಂದ ಮಹಮದ್ ನಲಪಾಡ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವರು.
ಭಾರತೀಯ ಯುವ ಕಾಂಗ್ರೆಸ್ ದೇಶೀಯ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ಅವರು ನಿನ್ನೆ ಈ ಬಗೆಗೆ ಆದೇಶ ಹೊರಡಿಸಿದರು.
ಚುನಾವಣೆಯಲ್ಲಿ ನಲಪಾಡ್‌ಗೆ ಹೆಚ್ಚು ಮತ ಬಂದಿತ್ತೆಂದು, ಕೆಲವು ಆಪಾದನೆಗಳು ಇದ್ದ ಕಾರಣ ಅವರ ಆಯ್ಕೆ ತಡೆಹಿಡಿಯಲಾಯಿತ್ತು.
ಸಿದ್ದರಾಮಯ್ಯ ಬಣ ರಕ್ಷಾ ರಾಮಯ್ಯರನ್ನೇ ಮುಂದುವರಿಸಲು ನಿರ್ಣಯಿಸಿದ್ದು, ಡಿ. ಕೆ. ಶಿವಕುಮಾರ್ ಬಣಕ್ಕೆ ಅಪಥ್ಯ ಆಗಿತ್ತು. ಆದ್ದರಿಂದ ಪಟ್ಟು ಹಿಡಿದು ಈ ತೀರ್ಮಾನ ಬರುವಂತೆ ಮಾಡಿದ್ದಾರೆ.