ಉಜಿರೆ. ಫೆ.28: “ಸೃಷ್ಟಿಗೆ ಬ್ರಹ್ಮ, ಅಭಿವೃದ್ಧಿಗೆ ವಿಷ್ಣು, ಲಯಕ್ಕೆ ಶಿವನು ಅಧಿಪತಿಯಾಗಿದ್ದಾನೆ. ನಮ್ಮ ಬದುಕನ್ನುದೇವರಿಗೆ ಸಮರ್ಪಿಸುವುದರಿಂದ ಮಾತ್ರ ನಮ್ಮಲ್ಲಿ ಅಮರತ್ವವನ್ನು ಸಾಧಿಸಬಹುದಾಗಿದೆ. ವ್ಯಸನಗಳಲ್ಲಿಯೇ ಕನಿಷ್ಠವಾದುದು ಮದ್ಯಪಾನ. ನಮ್ಮಲ್ಲಿರುವದು ರಾಭಿಮಾನವನ್ನು ಪ್ರಕಟಪಡಿಸಲು, ದುರ್ನಡತೆಯನ್ನು ಸಮರ್ಥಿಸಲು, ದೋಷಗಳನ್ನು ಮರೆಮಾಚಲು ದುಶ್ಚಟಕ್ಕೆ ದಾಸರಾಗುತ್ತೇವೆ. ವ್ಯಸನದಅಂತಿಮ ಪರಿಣಾಮವೇ ದು:ಖ, ಸಂಕಷ್ಟವಾಗಿದೆ. ಇದರಿಂದ ಹೊರಬರಲು ಪರಸ್ಪರ ಗೌರವ ಮನೋಭಾವನೆ, ದೇವರ ಮೇಲಿನ ಭಕ್ತಿ, ದುಡಿಮೆಯಲ್ಲಿ ಪ್ರಾಮಾಣಿಕತೆ, ವ್ಯಕ್ತಿತ್ವದೊಂದಿಗೆ ಉತ್ತಮ ಪ್ರಭಾವಳಿ, ದೇವರೊಡನೆ ಅನುಸಂಧಾನ, ಭಜನೆ, ಧ್ಯಾನ, ಸಂಯಮ, ಕುಟುಂಬದ ಪ್ರೀತಿ, ಕ್ಷಮಾಗುಣ, ಕುಟುಂಬದಲ್ಲಿ ಉತ್ತಮ ಸಂಬಂಧ ಮತ್ತು ಒಪ್ಪಂದ, ಪರಸ್ಪರ ಆತ್ಮೀಯತೆ, ಸಕಾರಾತ್ಮಕ ಮನೋಭಾವನೆ ಬಹಳ ಮುಖ್ಯ. ಮದ್ಯವರ್ಜನೆಯಾದಾಗ ಈ ಅಂಶಗಳನ್ನು ಮೈಗೂಡಿಸಿಕೊಂಡು ಅಮೃತತ್ವ ಸಾಧಿಸಿದಾಗ ಜೀವನದ ಪರಮೋನ್ನತ ಹಂತಕ್ಕೆತಲುಪಲು ಸಾಧ್ಯ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್‍ರವರು ತಿಳಿಸಿದರು. ಇವರುಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆಯುತ್ತಿರುವ 171ನೇ ವಿಶೇಷ ಮದ್ಯವರ್ಜನ ಶಿಬಿರದ ಕುಟುಂಬದ ದಿನ ಮತ್ತು ಸಮಾರೋಪ ಸಮಾರಂಭಕ್ಕೆ ಆಗಮಿಸಿ ಮಾರ್ಗದರ್ಶನ ನೀಡಿದರು. ಶಿಬಿರದಲ್ಲಿ ವಿವಿಧ ಜಿಲ್ಲೆಗಳ 89ಮಂದಿ ಶಿಬಿರಾರ್ಥಿಗಳು ದಾಖಲಾಗಿದ್ದರು.

ಶಿಬಿರವನ್ನು 8 ದಿನಗಳ ಕಾಲ ನಡೆಸಲಾಗಿದ್ದು, ವೈಯಕ್ತಿಕ ಸಲಹೆ ಹಾಗೂ ಕೌಟುಂಬಿಕ ಸಲಹೆಯ ಮೂಲಕ ವ್ಯಸನಿಗಳ ವಿಚಾರಗಳನ್ನು ತಿಳಿದು ಮನ:ಪರಿವರ್ತನೆ ಮಾಡಲುಕ್ರಮ ಕೈಗೊಳ್ಳಲಾಗಿದೆ. ಶಿಬಿರದಲ್ಲಿ ಯೋಗ, ಧ್ಯಾನ, ವ್ಯಾಯಾಮ, ಪ್ರಾಣಾಯಾಮವನ್ನು ಶ್ರೀ ಧರ್ಮಸ್ಥಳ ಯೋಗ ಮತ್ತು ಪ್ರಕೃತಿಚಿಕಿತ್ಸಾಆಸ್ಪತ್ರೆಯಡಾ| ಅರುಣ್, ಮನೋವೈದ್ಯಕೀಯ ಚಿಕಿತ್ಸೆಯನ್ನು ಡಾ| ಶ್ರೀನಿವಾಸ ಭಟ್, ಮಂಗಳೂರು, ಶ್ರೀಮತಿ ಸುಮನ್ ಪಿಂಟೋ ಮಂಗಳೂರು, ನೀಡಿದ್ದು, ವೈದ್ಯಾಧಿಕಾರಿಯಾಗಿ ಶ್ರೀ ಧರ್ಮಸ್ಥಳ ಆಸ್ಪತ್ರೆ ಉಜಿರೆಯ ಡಾ|…ಬಾಲಕೃಷ್ಣ ಭಟ್‍ರವರು ಸಹಕರಿಸಿದ್ದು, ಪಂಚಮಿ ಹಿತಾಯ ಆಯುರ್ಧಾಮ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ| ಮೋಹನ್‍ದಾಸ್ ಗೌಡ ಆಗಮಿಸಿ ಸಹಕರಿಸಿರುತ್ತಾರೆ. ಶಿಬಿರದಲ್ಲಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿಗಳಾದ ನಂದಕುಮಾರ್, ಆರೋಗ್ಯ ಸಹಾಯಕರಾದ ಶ್ರೀಮತಿ ಜಯಲಕ್ಷ್ಮೀ, ಮೇಲ್ವಿಚಾರಕರಾದ ಅವಿನಾಶ್ ಮತ್ತು ರಾಜೇಶ್‍ರವರು ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ:07.03.2022ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.