ಉಜಿರೆ: ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ಆಶ್ರಯದಲ್ಲಿ ಇದೇ 29 ರಂದು ಮಂಗಳವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಯೋಗ ಮಹೋತ್ಸವದ ಅಂಗವಾಗಿ ಯೋಗ ಪ್ರಾತ್ಯಕ್ಷಿಕೆ ಮತ್ತುP Áರ್ಯಾಗಾರವನ್ನು ಆಯೋಜಿಸಿದ್ದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಮಾರಂಭವನ್ನು ಉದ್ಘಾಟಿಸುವರು ಎಂದು ಉಜಿರೆಯ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ತಿಳಿಸಿದ್ದಾರೆ.
ವಿಶ್ವದೆಲ್ಲೆಡೆ ಜೂನ್ 21 ರಂದು ನಡೆಯುವ ವಿಶ್ವಯೋಗ ದಿನಾಚರಣೆಗೆ ಪೂರ್ವಭಾವಿಯಾಗಿ ದೇಶದ ಪ್ರತಿಷ್ಠಿತ 100 ಯೋಗ ಸಂಸ್ಥೆಗಳಿAದ 100 ಐತಿಹಾಸಿಕ ಕೇಂದ್ರಗಳಲ್ಲಿ ಒಂದು ದಿನದಯೋಗ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಬೆಳ್ತಂಗಡಿ ತಾಲ್ಲೂಕಿನಲ್ಲಿ 15 ಕೇಂದ್ರಗಳಲ್ಲಿ ಇದೇ 23 ರಿಂದ ಏ.3 ರ ವರೆಗೆ ಸಾರ್ವಜನಿಕರಿಗಾಗಿ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ.
ಉಜಿರೆ: ಆಂದ್ರಪ್ರದೇಶದ ಅನAತಪುರ ಜಿಲ್ಲೆಯ ಹಾವಳಿಗೆ ಗ್ರಾಮದಲ್ಲಿರುವ ಶ್ರೀ ಜಂಬುಲಿoಗೇಶ್ವರ ದೇವಸ್ಥಾನದ ಪುರಾತನ ರಥವನ್ನು ದೇವಸ್ಥಾನದ ಸಮಿತಿಯವರು ಧರ್ಮಸ್ಥಳದ ಮಂಜೂಷವಸ್ತು ಸಂಗ್ರಹಾಲಯಕ್ಕೆಕೊಡುಗೆಯಾಗಿ ನೀಡಿದ್ದಾರೆ.
ಸಮಿತಿಯವರು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮೂಲಕ ರಥವನ್ನು ವಸ್ತು ಸಂಗ್ರಹಾಲಯಕ್ಕೆ ನೀಡಿದರು.
ಮಂಜೂಷ ವಸ್ತು ಸಂಗ್ರಹಾಲಯದಲ್ಲಿಪುರಾತನ ಮರದರಥವನ್ನು ಸಂರಕ್ಷಿಸಿ ಭಕ್ತಾದಿಗಳ ವೀಕ್ಷಣೆಗೆ ಅವಕಾಶ ನೀಡಲಾಗುವುದು.