ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಅವೈಜ್ಞಾನಿಕ ಕಾಮಗಾರಿಗಳು ನಗರದಲ್ಲೆಲ್ಲ ಕೃತಕ ನೆರೆಗೆ ಕಾರಣವಾದುದನ್ನು ಮಂಗಳೂರಿಗರು ಸ್ಪಷ್ಟವಾಗಿ ಕಾಣುವಂತೆ ಮಾಡಿತು ನಿನ್ನೆಯ ಮಳೆ.

ಬೈಂದೂರು, ಕುಂದಾಪುರ, ಉಡುಪಿ, ಕಣ್ಣೂರು, ಸುಳ್ಯದವರೆಗೂ ಮಳೆ ಮತ್ತು ಪ್ರವಾಹ ಕಾಣಿಸಿತು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದರು. ಈ ವಾರವೂ ಜೋರು ಮಳೆಯ ಸೂಚನೆ ಇರುವುದರಿಂದ ಜುಲಾಯಿ 4ರಿಂದ 7ನೇ ತಾರೀಕಿನವರೆಗೆ ರೆಡ್ ಅಲರ್ಟ್ ಘೋಷಿಸಲಾಯಿತು.

ಪಡೀಲ್ ಬಳಿ ರೈಲು ಹಳಿಯ ಮೇಲೆ ಮಣ್ಣು ಕುಸಿದು ಬಿದ್ದಿದೆ. ಕೊಟ್ಟಾರ ಚೌಕಿಯಂಥ ಮಂಗಳೂರಿನ ತಗ್ಗು ಪ್ರದೇಶಗಳು ನೆರೆಯುಂಡವು.

ದ. ಕ. ಜಿಲ್ಲೆಯಲ್ಲಿ 11 ಮನೆಗಳು ಪೂರ್ಣ ನಾಶವಾದರೆ, 77 ಮನೆಗಳು ಭಾಗಶಾ‌ ಹಾನಿಗೀಡಾಗಿವೆ.

ಸುಳ್ಯ ಬಳಿ ಅಂತರರಾಜ್ಯ ರಸ್ತೆ ಕೊಚ್ಚಿ ಹೋಗಿದೆ. 

ಕಳೆದ ವರುಷ ಮುಂಬಯಿಯಿಂದ ಬಂದು ಮೂಲ್ಕಿ ಲಿಂಗಪ್ಪಯ್ಯ ಕಾಡಿನ ಬಳಿ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದ 40ರ ಕೂಲಿ ಕಾರ್ಮಿಕ ಕೂಲಿ ಕಾರ್ಮಿಕ ಚರಂಡಿ ಸೆಳವಿಗೆ ಸಿಲುಕಿ ಮೃತರಾದರು.

38 ವಿದ್ಯುತ್ ಕಂಬಗಳು ಧರೆಗುರುಳಿದರೆ, 3 ಟ್ರಾನ್ಸ್‌ಫಾರ್ಮರ್‌ಗಳು ಕೆಟ್ಟು ಹೋಗಿರುವುದಾಗಿ ಇಲಾಖೆ ತಿಳಿಸಿದೆ.