ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಇರುವ ಸಿಪಿಎಂ ಪಕ್ಷದ ಕೇಂದ್ರ ಕಚೇರಿ ಎಕೆಜಿ ಕೇಂದ್ರದ ಮೇಲೆ ಗುರುವಾರ ರಾತ್ರಿ ಹನ್ನೊಂದೂವರೆ ಗಂಟೆಗೆ ಯಾರೋ ಬಾಂಬ್ ಎಸೆದ ಪರಿಣಾಮ ಉದ್ವಿಗ್ನ ವಾತಾವರಣ ಉಂಟಾಗಿದೆ.

ಕಟ್ಟಡದ ಹೊರಗೆ ಬಿದ್ದುದರಿಂದ ಕಟ್ಟಡದ ಒಳಗೆ ‌ಹೆಚ್ಚು ಹಾನಿಯಾಗಿಲ್ಲ. ಸಿಸಿಟೀವಿ ದೃಶ್ಯದಲ್ಲಿ ಬೈಕ್‌ನಲ್ಲಿ ಬಂದ ಅಪರಿಚಿತ ಒಬ್ಬ ಸಣ್ಣ ಬಾಂಬ್ ಎಸೆದು ಪರಾರಿಯಾಗಿದ್ದು ಕಂಡು ಬಂದಿದೆ.

ಶುಕ್ರವಾರ ರಾಹುಲ್ ಗಾಂಧಿಯವರು ಕೇರಳಕ್ಕೆ ಬರುತ್ತಿದ್ದು, ಅದಕ್ಕೆ ಮೊದಲ ರಾತ್ರಿ ಈ ಕೃತ್ಯವನ್ನು ಯಾರೋ‌ ನಡೆಸಿದ್ದಾರೆ. 

ಬಾಂಬ್ ನಿಷ್ಕ್ರಿಯ ದಳ ಸ್ಥಳ ಪರಿಶೀಲಿಸಿತು. ಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಕೃತ್ಯವನ್ನು ಖಂಡಿಸಿದರು. ಸಿಪಿಎಂನವರು ಶಾಂತಿಯುತ ಪ್ರತಿಭಟನೆ ನಡೆಸಿದರು.