2021ರ ಅಕ್ಟೋಬರ್ 7ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಚಾಮರಾಜನಗರದ ಹೊರವಲಯದ ಯಡಬೆಟ್ಟದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಉದ್ಘಾಟನೆಗೆ ಬಂದಿದ್ದಾಗ ಸರ್ವ ಸಜ್ಜುಗೊಳಿಸಿದ ಪೂರೈಕೆದಾರರಿಗೆ ರೂ. 1.84 ಕೋಟಿ ರೂಪಾಯಿ ಇನ್ನೂ ಸಂದಾಯವಾಗಿಲ್ಲ ಎಂದು ಒದಗಿಸಿದವರು ಅಲವತ್ತುಕೊಂಡಿದ್ದಾರೆ.

ರಾಷ್ಟ್ರಪತಿಗಳು ಬಿಳಿಗಿರಿರಂಗನ ಬೆಟ್ಟಕ್ಕೆ ಬಂದವರು ಯಡಬೆಟ್ಟದಲ್ಲಿ 450 ಹಾಸಿಗೆಗಳ ಆಸ್ಪತ್ರೆ ಉದ್ಘಾಟನೆ ಮಾಡಿದ್ದರು.

ರಾಷ್ಟ್ರಪತಿ ಮತ್ತು ಅವರ ಪರಿವಾರಕ್ಕೆ ವಸತಿ, ಊಟೋಪಚಾರ, ಶಾಮಿಯಾನಾ, ಧ್ವನಿವರ್ಧಕ ಇವನ್ನೆಲ್ಲ ಒದಗಿಸಿದವರಿಗೆ ಒಟ್ಟು ಕೊಡಬೇಕಾದ ಬಾಕಿ ರೂ. 1.84 ಕೋಟಿ ಸಂದಾಯ ಆಗದೆ ಉಳಿದಿದೆ.