ಹೆತ್ತವರಿಂದಲೇ ಮೋಜು ಮಸ್ತಿಗೆ ಹಣ ಸುಲಿಯಲು ಅಪಹರಣದ ನಾಟಕವಾಡಿದ 24ರ ವರುಣ್ ನಾಯಕ್ ಎಂಬ ಯುವಕನನ್ನು ಉಡುಪಿ ನಗರ ಪೋಲೀಸರು ಪಣಜಿ ಕ್ಯಾಸಿನೋದಿಂದ ಬಂಧಿಸಿ ತಂದರು.
ಬ್ಯಾಂಕ್ ಉದ್ಯೋಗಿ ಮತ್ತು ಶಿಕ್ಷಕಿ ಹೆತ್ತವರು ನಿವೃತ್ತರು. ಇವರು ನಮ್ಮ ಮಗನನ್ನು ಅಪಹರಿಸಿ, 5 ಲಕ್ಷ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದರು.
ನಿರೀಕ್ಷಕ ಪ್ರಮೋದ್ ಕುಮಾರ್ ತಂಡ ರಚಿಸಿದರು. ಫೋನ್ ಲೋಕೇಶನ್ ಮೇಲೆ ಗೋವಾದ ಪಣಜಿಗೆ ಹೋದರೆ ಅಲ್ಲಿ ವರುಣ್ ಕ್ಯಾಸಿನೋ ಒಂದರಲ್ಲಿ ಸ್ನೇಹಿತರ ಜೊತೆಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ.
ಓದು ಬಿಟ್ಟ ನನಗೆ ಮೋಜು ಅಭ್ಯಾಸವಾಗಿದೆ. ನಾನೇ ಫೋನ್ ಮಾಡಿ ಅಳುತ್ತ ಅಪಹರಿಸಿದ್ದಾರೆ, ಒತ್ತೆ ಹಣ ಕೇಳಿದ್ದಾರೆ ಎಂದು ಒಪ್ಪಿಕೊಂಡ. ಉಡುಪಿ ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.