ಅಸ್ಸಾಂ ಪ್ರವಾಹದಲ್ಲಿ 2,254 ಹಳ್ಳಿಗಳು ನೀರಿಗೆ ಬಿದ್ದಿದ್ದು 21.5 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ ಎಂದು ಅಸ್ಸಾಂ ನೆರೆ ವರದಿ ಮತ್ತು ಮಾಹಿತಿ ನಿರ್ವಹಣಾ ವ್ಯವಸ್ಥೆಯವರು ತಿಳಿಸಿದ್ದಾರೆ.
ಮಂಗಳವಾರ ಸಹ 8 ಜನರು ನೆರೆಗೆ ಬಲಿ ಆಗುವುದರೊಂದಿಗೆ ಒಟ್ಟು ಸಾವು ಸಂಖ್ಯೆಯು 134ಕ್ಕೆ ಏರಿತು. ಸಿಲ್ಚಾರ್ ಮತ್ತು ಕಾಚಾರ್‌ಗಳು ಹೆಚ್ಚು ಬಾಧಿತವಾಗಿವೆ. ಒಟ್ಟು 22 ಜಿಲ್ಲೆಗಳು ಜಲಾವೃತವಾಗಿವೆ. 1.9 ಲಕ್ಷ ಜನರು ಪರಿಹಾರ ಶಿಬಿರಗಳಲ್ಲಿ ಇದ್ದಾರೆ.