1857ರ ಸ್ವಾತಂತ್ರ್ಯ ಸಮರದ ಬಳಿಕ ಬ್ರಿಟಿಷ್ ನೇರ ಆಡಳಿತ ಭಾರತದಲ್ಲಿ ಆರಂಭವಾಗುತ್ತಲೇ ನಾನಾ ಸುಧಾರಣೆಯ ಕೆಲಸಗಳಿಗೆ ಬ್ರಿಟನ್ ಸರಕಾರ ಚಾಲನೆ ನೀಡಿತು. ಅವುಗಳಲ್ಲಿ ಒಂದು ಮಂಗಳೂರಿನ ವಿಶ್ವವಿದ್ಯಾನಿಲಯದ ಕಾಲೇಜು.
ಬ್ರಿಟನ್ ರಾಣಿಯ ನೇರ ಆಡಳಿತಕ್ಕೆ ಒಳಪಡುವುದಕ್ಕೆ ಮೊದಲು ಈಸ್ಟ್ ಇಂಡಿಯಾ ಕಂಪನಿಯು ಬ್ರಿಟನ್ ಪರ ಭಾರತವನ್ನು ಆಳುತ್ತಿತ್ತು. ಬ್ರಿಟನ್ ನೇರ ಆಡಳಿತ ಬರುತ್ತಲೇ ಮೊದಲು ಕಲ್ಕತ್ತಾ (ಇಂದಿನ ಕೊಲ್ಕತ್ತಾ) ಮತ್ತು ಬೆನ್ನಿಗೆ ಬಾಂಬೆ, ಮದರಾಸುಗಳಲ್ಲಿ ಮೂರು ಹೈಕೋರ್ಟ್ ಮತ್ತು ಮೂರು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದರು. ಇವೆಲ್ಲ ಐದಾರು ವರುಷಗಳಲ್ಲಿ ಆಯಿತು. ಇಂಗ್ಲಿಷ್ ಶಿಕ್ಷಣಕ್ಕೆ ಒತ್ತು ನೀಡಲು ಪ್ರತಿಯೊಂದು ಜಿಲ್ಲೆಗೊಂದರಂತೆ ಮೊದಲು ಕಾಲೇಜುಗಳನ್ನು ಸ್ಥಾಪಿಸಲು ನಿರ್ಧರಿಸಿದರು.
1799ರಲ್ಲಿ ಟಿಪ್ಪು ಸುಲ್ತಾನ್ ಮರಣಾನಂತರ ಕರಾವಳಿ ಬ್ರಿಟಿಷರ ವಶವಾಯಿತು. ಟಿಪ್ಪು ಇದನ್ನು ಕಿನಾರಾ ಎಂದಿದ್ದನ್ನೇ ಬ್ರಿಟಿಷರು ಕೆನರಾ ಜಿಲ್ಲೆ ಮಾಡಿದರು. ಆಗ ಗೋವಾದಿಂದ ಕಣ್ಣೂರುವರೆಗೂ ಒಂದೇ ಜಿಲ್ಲೆ. ಕೆನರಾ ಜಿಲ್ಲೆಯ ಕೇಂದ್ರ ಮಂಗಳೂರು. ಹಾಗಾಗಿ 1966-68ರಲ್ಲಿ ಈ ಕಾಲೇಜು ಆರಂಭವಾಯಿತು. ಮುಂಬಯಿ ಬಿಟ್ಟರೆ ಆಗ ಕರಾವಳಿಯಲ್ಲಿ ಆದ ಮೊದಲ ಕಾಲೇಜು ಇದು.
ಮಂಗಳೂರಿನ ಲ್ಯಾಂಡ್ ಮಾರ್ಕ್ ಈ ಕಾಲೇಜು ಇಂದಿಗೂ ಇದೆ. ಹಾಗಾಗಿ ಕನಿಷ್ಟ ಆರು ತಲೆಮಾರುಗಳವರು ಓದಿದ ಕಾಲೇಜು ಇದು.
ಮೊದಲು ಮದರಾಸು ವಿವಿಯ ಭಾಗವಾಗಿದ್ದ ಇದು, ಅನಂತರ ಮೈಸೂರು ವಿಶ್ವವಿದ್ಯಾನಿಲಯದ ಭಾಗವಾಯಿತು. ಈಗಂತೂ ಮಂಗಳೂರು ವಿಶ್ವವಿದ್ಯಾನಿಲಯವೇ ಇದೆ.
-ಪೇಜಾ