ಕೊರೋನಾ ಅಲ್ಲದೆ ರೂಪಾಂತರ ಕೋವಿಡ್   19 ತೊಂದರೆಯಿಂದ ‌ಸಾಂಟಾ ಕ್ಲಾಸ್ ಯಾನ ಕಷ್ಟ ಆಗಿದ್ದರೂ ಸಾಂಟಾ ಎಲ್ಲ ಕಡೆ ಬಾರದೆ‌ ಉಳಿಯುವುದು ಸಾಧ್ಯವಾಗಲಿಲ್ಲ.

ವೇಷಧಾರಿ ಸಾಂಟಾ ಕ್ಲಾಸ್ ಓಡಾಟ ಈ ಬಾರಿ ಕಡಿಮೆ ಇತ್ತು. ಆದರೆ ಮೂರ್ತಿ ಸಾಂಟಾ ಕ್ಲಾಸ್ ರು ಸಾಕಷ್ಟು ‌ಕಡೆ ಕಾಣಿಸಿಕೊಂಡರು.

ಸಾಂಟಾ ವಾಸದ ನೆಲೆ ತಂಡ್ರಾ ಮಂಜು ಪ್ರದೇಶವಾದುದರಿಂದ ಆತನ ಉಡುಗೆ ಮಂಜು ಪ್ರದೇಶದ್ದಾಗಿದೆ. ತಲೆಯ ಟೋಪಿ ಬಿಳಿ ಕುಚ್ಚಿನ ಕೆಂಪು ಬಣ್ಣದ್ದಾಗಿದ್ದು ಇದು ಸಾಂಟಾ ಟ್ರೇಡ್ ಮಾರ್ಕ್ ಕೂಡ ಆಗಿದೆ. ತಂಡ್ರಾ ಮಂಜು ಪ್ರದೇಶದಿಂದ ಬರುವುದರಿಂದ ಸಾಂಟಾ ಬರುವ ಗಾಡಿ ಹಿಮ ಸಾರಂಗಗಳು ಎಳೆಯುವ ಜಾರುಗಾಡಿ (ಸ್ಲೆಡ್ಜ್) ಆಗಿದೆ.

ಸಾಂಟಾ ಕ್ಲಾಸ್ ಎಂದರೆ ಕ್ರಿಸ್ಮಸ್   ವೇಳೆ ಉಡುಗೊರೆ ತರುವ ಅದರಲ್ಲೂ ಮಕ್ಕಳಿಗೆ ಸಿಹಿ ಇತ್ಯಾದಿ ಕೊಟ್ಟು‌ ಹೋಗಲು ಬರುವ ಬಿಳಿ ಗಡ್ಡದ‌ ಅಜ್ಜ. 

ಸಾಂಟಾರ ವರ್ಕ್ ಶಾಪ್ ‌ಉತ್ತರ ಧ್ರುವ ಪ್ರದೇಶದಲ್ಲಿ ಇರುವುದಾಗಿ ನಂಬಿಕೆ. ಈ ಸಾಂಟಾರಿಗೆ ಫಾದರ್ ಕ್ರಿಸ್ಮಸ್, ಸೇಂಟ್ ನಿಕೋಲಸ್, ಸೇಂಟ್ ನಿಕ್, ಕ್ರಿಸ್ ಕ್ರಿಂಗಲ್, ಸಾಂಟಾ ಎಂಬಿತ್ಯಾದಿಯಾಗಿ ಹೆಸರುಗಳು ಸಾಂಟಾ ಕ್ಲಾಸ್ ಅವರಿಗೆ ಇವೆ. 

ಸಾಮಾನ್ಯವಾಗಿ ಹೆತ್ತವರೇ ಸಾಂಟಾ ಹೆಸರಿನಲ್ಲಿ ಚಳಿ‌ ಪ್ರದೇಶದಲ್ಲಿ ಸಾಕ್ಸ್ ಒಳಗೆ ಸಿಹಿ ಇಟ್ಟು ಅಚ್ಚರಿಗೊಳಿಸುತ್ತಿದ್ದುದೇ ಸಾಂಟಾ ಕಲ್ಪನೆಯ ಮೂಲ. ಚಳಿಗಾಲದಲ್ಲಿ ಚಳಿ ಪ್ರದೇಶಗಳಲ್ಲಿ ಆಹಾರದ ತೊಂದರೆ ಇತ್ತು ಮತ್ತು ಸಾಕ್ಸ್ ಅತ್ಯಗತ್ಯವಾಗಿತ್ತು.

ಸಾಂಟಾ ಕ್ಲಾಸ್ ರನ್ನು ಪಶ್ಚಿಮ ಕ್ರಿಶ್ಚಿಯನ್ ಸಂಸ್ಕೃತಿಯ ಲೆಜೆಂಡ್ ಎಂದು ಪರಿಗಣಿಸಲಾಗುತ್ತದೆ. ಅನಂತರದ ದಿನಗಳಲ್ಲಿ ಸಂತ ನಿಕೋಲಸ್ ಅವರು ‌ಬಡವರಿಗೆ ಮಾಡುತ್ತಿದ್ದ ಸಹಾಯದ ಕಾರಣ  ಅವರ ಸ್ಪೂರ್ತಿಯೇ ಅನಂತರದ ಸಾಂಟಾರಿಗೆ‌ ಮಾದರಿಯಾಗಿದೆ. ಗ್ರೀಸ್ ನ ಮೈರಾದ ಇವರು ಉಡುಗೊರೆ ನೀಡುವ ಸಂತ ಎಂದೇ ಖ್ಯಾತರು. ಇವರನ್ನು ಅನುಸರಿಸಿ ಡಚ್ಚರು ಸಂತ‌ ನಿಕೋಲಸ್ ಅವರನ್ನು ಮಾದರಿಯಾಗಿ ಇಟ್ಟುಕೊಂಡು ಸಿಂಟರ್ ಕ್ಲಾಸ್ ಕೊಡುಗೆಯ ಅಜ್ಜ ಎಂದು ಆರಂಭಿಸಿದರು. 

ಅದೇ ಆಧುನಿಕ ಸಾಂಟಾ ಕ್ಲಾಸ್ ಗೆ ಮೂಲ. ಸಂತ ನಿಕೋಲಸ್ ಅವರು ‌ಕ್ರಿಸ್ತ‌ ಶಕ ನಾಲ್ಕನೇ ಶತಮಾನದವರು. ಸಾಂಟಾ ಮನೆಯ ಚಿಮಣಿಯ ಮೂಲಕ ತೂರಿ‌ ಬಂದು ಉಡುಗೊರೆ ಇಟ್ಟು ಹೋಗುತ್ತಾರೆ ಎಂಬ ನಂಬಿಕೆಯೂ ಯೂರೋಪು ದೇಶಗಳಲ್ಲಿ ಇದೆ. -ಪೇಜಾ