ಉಡುಪಿ: ಆಟಿಸಂ ಎಂಬುವುದು ಒಂದು ಖಾಯಿಲೆಯಲ್ಲ ಇದೊಂದು ಸ್ವಭಾವ. ಇಂತಹ ಹಠ ಸ್ವಭಾವದ ಮಕ್ಕಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವುದು ಪ್ರಸ್ತುತ ಸಮಾಜದಲ್ಲಿ ಬಹಳ ಅನಿವಾರ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಟ್ಟ್ ವೈ ಹೇಳಿದರು.

 ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಉಡುಪಿ ಜಿಲ್ಲೆ, ಆಟಿಸಂ ಸೊಸೈಟಿ ಆಫ್ ಉಡುಪಿ ಇದರ ಸಂಯುಕ್ತ ಆಶ್ರಯದೊಂದಿಗೆ ಅಂಗನವಾಡಿ ವೇಲ್ವಿಚಾರಕರಿಗೆ ಮತ್ತು ಆಶಾ ಕಾರ್ಯಕರ್ತ ಮೇಲ್ವಿಚಾರಕರಿಗೆ, ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ನಡೆದ ಸ್ವಲೀನತೆ ಜಾಗೃತಿ ಕಾರ್ಯಗಾರ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಜಿಲ್ಲೆಯಲ್ಲಿ 58 ಮಕ್ಕಳಿಗೆ ಆಟಿಸಂ ಇರುವ ಪಟ್ಟಿ ಸಿಕ್ಕಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಸರ್ವೆ ಮಾಡುವ ಮೂಲಕ ಮುಂದೆ ಆ ಮಕ್ಕಳಿಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬಹುದು ಎಂಬ ಯೋಜನೆ ಕೈಗೊಳ್ಳಬಹುದು , ಆಟಿಸಂ ಎಂಬುವುದು ಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ ಮುಂದೆ ಸಮಾಜದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಕಷ್ಟವಾಗಬಹುದು, ಆದ್ದರಿಂದ ಸಣ್ಣ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಬದಲಾವಣೆ ತರಲು ಅಂಗನವಾಡಿ ಮೇಲ್ವಿಚಾರಕರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಈ ಜಾಗೃತಿ ಕಾರ್ಯಗಾರ ಉಪಯುಕ್ತವಾದದ್ದು ಎಂದರು.

 ಆಟಿಸಂ ಸೊಸೈಟಿ ಆಫ್ ಉಡುಪಿ ಅಧ್ಯಕ್ಷರಾದ ಡಾ. ಪಿ ವಿ ಭಂಡಾರಿ ಮಾತನಾಡಿ ಆಟಿಸಂ ಬಗ್ಗೆ ಜನ ಸಾಮಾನ್ಯರಿಗೆ ಸರಿಯಾದ ಮಾಹಿತಿ ಸಿಗಬೇಕು ಜೊತೆಗೆ ಆಟಿಸಂ ಕಂಡೀಷನ್ ಇರುವ ಮಕ್ಕಳು ಮತ್ತು ಮಕ್ಕಳ ಪೋಷಕರ ಸಮಸ್ಯೆಗಳಿಗೆ ಸ್ಪಂಧಿಸುವAತಹ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗಬೇಕು ಎಂದರು.

 ಆಟಿಸಂ ಸಮಸ್ಯೆಯನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಸರಿಯಾದ ತರಬೇತಿಯನ್ನು ನೀಡಿದ್ದಲ್ಲಿ ಗುಣಪಡಿಸಲು ಸಾಧ್ಯ, ಇದಕ್ಕೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಉಡುಪಿ, ಕಾರ್ಕಳ, ಕುಂದಾಪುರಗಳಲ್ಲಿ ಚಿಕಿತ್ಸಾ ಸೆಂಟರ್ ಗಳನ್ನು ಸ್ಥಾಪಿಸುವ ಉದ್ದೇಶ ಇದೆ ಎಂದರು.

 ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ ಅಂಗನವಾಡಿ ವೇಲ್ವಿಚಾರಕರಿಗೆ ಮತ್ತು ಆಶಾ ಕಾರ್ಯಕರ್ತೆಯರು ಸಮಾಜಲ್ಲಿ ಮಕ್ಕಳು ಹಾಗೂ ಜನ ಸಾಮಾನ್ಯರಲ್ಲಿ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ, ಆದ್ದರಿಂದ ಈ ಜಾಗೃತಿ ಕಾರ್ಯಗಾರದ ಉಪಯೋಗವನ್ನು ಪಡೆದುಕೊಂಡು ಸಹಕರಿಸಬೇಕೆಂದು ಮನವಿ ಮಾಡಿದರು.

 ಕಾರ್ಯಕ್ರಮದಲ್ಲಿ ಡಾ. ಗೀತ ಮಯ್ಯ ನಿರ್ದೇಶಕರು, ಡಿಪಾರ್ಟ್ಮೆಂಟ್ ಆಫ್ ಸ್ಟೂಡೆಂಟ್ ಅಫೆರ್ಸ ಮಾಹೆ ಮಣಿಪಾಲ, ಲಕ್ಷಿö್ಮ ಕಾರ್ಯಕ್ರಮ ಸಂಯೋಜಕ, ಭಾರತೀಯ ವಿಕಾಸ ಡ್ರಸ್ಟ್, ಮಣಿಪಾಲ. ಮುಂತಾದ ಗಣ್ಯರು ಭಾಗವಹಿಸಿದ್ದರು.

 ವಿಕಲಚೇತನರ ಸಬಲೀಕರಣ ಅಧಿಕಾರಿ ರತ್ನ ಸ್ವಾಗತಿಸಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಂದಿಸಿ, ಕಾರ್ಯಕ್ರಮ ವ್ಯವಸ್ಥಾಪಕ ಆಟಿಸಂ ಸೊಸೈಟಿ ಆಫ್ ಉಡುಪಿ ಕೀರ್ತೆಶ್ ಎಸ್ ನಿರೂಪಿಸಿದರು.