ಸ್ತ್ರೀ ಸಂಘಟನೆ ಬಂಟ್ವಾಳ ವಲಯ ಹಾಗೂ ರೋಟರಿ ಕ್ಲಬ್ ಮೊಡಂಕಾಪು ಜಂಟಿಯಾಗಿ ಆಯೋಜಿಸಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ಮಾರ್ಚ್ 20 ರಂದು ರವಿವಾರ ಬೆಳಿಗ್ಗೆ 9.30 ರಿಂದ ಪೂರ್ವಾಹ್ನ 1.30ರ ವರೆಗೆ ಮೊಡಂಕಾಪು ಚರ್ಚಿನಾ ಅನುಗ್ರಹ ಸಭಾಂಗಣದಲ್ಲಿ ಜರುಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂಘಟನೆಯ ಕೇಂದ್ರದ ಅತ್ಮೀಕ ನಿರ್ದೇಶಕರಾದ ಧರ್ಮಗುರು ವಂ| ಫಾ| ಫ್ರಾನ್ಸಿಸ್ ಡಿಸೋಜ, ಹಾಗೂ ಉದ್ಘಾಟಕರಾಗಿ ಬಂಟ್ವಾಳ ವಲಯದ ಸ್ತ್ರೀ ಸಂಘಟನೆಯ ನಿರ್ದೇಶಕರು ಹಾಗೂ ಮೊಡಂಕಾಪು ಚರ್ಚಿನಾ ಧರ್ಮ ಗುರುಗಳಾದ ವಂ| ಫಾ| ವಲೇರಿಯನ್ ಡಿಸೋಜರವರು ವೇದಿಕೆಯಲ್ಲಿರುವ ಅತಿಥಿಗಳೊಂದಿಗೆ ಜೊತೆಗೂಡಿ ಕಾರ್ಯಕ್ರಮದ ದೀಪವನ್ನು ಬೆಳಗಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಕರ್ನಾಟಕದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಂಗಳೂರು ಮತ್ತು ಪುತ್ತೂರು ತಾಲೂಕಿನ ವಿಸ್ತರಣಾಧಿಕಾರಿ ಮಂಜುನಾಥ ಶೆಟ್ಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಉದ್ಯಮಿಗಳ ಸಬಲೀಕರಣ ನಿರ್ದೇಶಕರಾದ ಮರ್ಜೊರಿ ಅರನ್ಹ ಟೆಕ್ಸಿರ್ ರವರು, ಸ್ತ್ರೀ ಸಂಘಟನೆಯ ಕೇಂದ್ರದ ಅಧ್ಯಕ್ಷ ರಾದಂತಹ ಗ್ರೇಟ್ಟಾ ಪಿಂಟೊ, ಸ್ತ್ರೀ ಸಂಘಟನೆ ಬಂಟ್ವಾಳ ವಲಯದ ಅಧ್ಯಕ್ಷೆ ಅನಿತಾ ನೊರೊನ್ಹಾ ಮತ್ತು ಕಾರ್ಯದರ್ಶಿ ಶಾಂತಿ ಫೆರ್ನಾಂಡಿಸ್ ಹಾಗೂ ರೋಟರಿ ಕ್ಲಬ್ ಮೊಡಂಕಾಪು ಇದರ ಅಧ್ಯಕ್ಷರಾದ ರೋ| ಎಲಿಯಾಸ್ ಸಾಂಕ್ತೀಸ್, ಕಾರ್ಯದರ್ಶಿ ರೋ| ಪಿ.ಎ. ರಹೀಮ್ ರವರು ಹಾಗೂ ಮೊಡಂಕಾಪು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಹೆರಾಲ್ಡ್ ಡಿಸೋಜರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಹಾಗೂ ಮೊಡಂಕಾಪು ಚರ್ಚಿನ ಸಹಾಯಕ ಗುರುಗಳಾದ ವಂ|ಫಾ| ತ್ರಿಶಾನ್ ಡಿಸೋಜಾ, ವಂ|ಫಾ|ಮೆಲ್ವಿನ್ ಲೋಬೊ, ವಕೀಲಾರಾದ ರೋಶನ್ ಮತ್ತು ಸ್ತ್ರೀ ಸಂಘಟನೆ ಕೇಂದ್ರದ ಮಾಜಿ ಅಧ್ಯಕ್ಷೆ ಟೆರ್ರಿ ಪಾಯ್ಸ್ ಇವರು ಉಪಸ್ಥಿತರಿದ್ದರು. ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು,
ಸ್ತ್ರೀ ಸಂಘಟನೆಯ ಅಧ್ಯಕ್ಷೆ ಅನಿತಾ ನೊರೊನ್ಹಾರವರು ಹೂವನ್ನು ನೀಡಿ ಎಲ್ಲರನ್ನೂ ಸ್ವಾಗತಿಸಿದರು. ರೋಟರಿ ಕ್ಲಬ್ ಅಧ್ಯಕ್ಷರು ಪ್ರಾಸ್ತಾವಿಕ ಭಾಷಣ ಮಾಡಿದರು ಮುಖ್ಯ ಅತಿಧಿಗಳು ಭಾಷಣ ಮುಖಾಂತರ ಮಹಿಳೆಯರಿಗೆ ಶುಭಾ ಹಾರೈಸಿದರು. ಮಹಿಳೆಯರಿಗೆ ಸ್ವಂತ ಉದ್ದಿಮೆ ಮಾಡಲು ಸರ್ಕಾರದಿಂದ ಲಭಿಸುವ ಸೌಲಭ್ಯಗಳ ಬಗ್ಗೆ ಮಂಜುನಾಥ್ ಶೆಟ್ಟಿ ಇವರು ಮಾಹಿತಿ ನೀಡಿದರು. ಹಾಗೂ ಮರ್ಜೋರಿ ಅರನ್ಹರವರು ಮಹಿಳೆಯರಿಗೆ ಸ್ವಂತ ಉದ್ದಿಮೆ ಮಾಡಲು ತರಬೇತಿ ನೀಡುವ ಬಗ್ಗೆ, ನಿಮ್ಮ ದಿನದ ಖರ್ಚು ನೀವು ಸಾಧಿಸಲು ಸಾಧ್ಯ.ಮಲಗಬೇಡಿ ಎದ್ದೇಳಿ ಗಂಡಸರಿಗೆ ಮಾದರಿಯಾಗಿ ನಿಮ್ಮ ಮಕ್ಕಳು ಇದರಿಂದ ಚುರುಕಾಗುತ್ತಾರೆ. ಅವರಲ್ಲೂ ವ್ಯಕ್ತಿಯ ಕಲೆ ಉದ್ಭವಿಸುತ್ತದೆ ಎಂಬ ಮಾಹಿತಿಯನ್ನು ನೀಡಿ ಪ್ರೋತ್ಸಾಹಿಸಿದರು.
ಫರ್ಲಾ ಮತ್ತು ತೊಡಂಬಿಲ ಘಟಕದವರು ಸಂಸ್ಕೃತಿಕ ಕಾರ್ಯಕ್ರಮ ನೀಡಿ ಎಲ್ಲರನ್ನು ಮನರಂಜಿಸಿದರು. ಈ ಕಾರ್ಯಕ್ರಮದ ಕಾರ್ಯನಿರ್ವಹಿಕಿಯಾರಾದ ನಿರ್ಮಲಾ ಡೇಸಾ ಹಾಗೂ ಮ್ಯಾಗ್ನೆಟ್ ಡಿಸೋಜ ಇವರು ಜೊತೆಗೂಡಿ ಸಮಯದ ಪರಿಜ್ಞಾನ ಮೇರೆಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಧನ್ಯವಾದದ ಬಳಿಕ ರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮ ಭೋಜನದೊಂದಿಗೆ ಮುಕ್ತಾಯಗೊಂಡಿತು.