ರಶಿಯಾ ಉಕ್ರೇನ್ ರಣರಂಗ ನಾಲ್ಕು ದಿನ ದಾಟಿದೆ. ನ್ಯಾಟೋ ಗುಂಪು ಕೆಣಕಿದರೆ ಅಣ್ವಸ್ತ್ರಗಳನ್ನು ತಯಾರಾಗಿ ಇಡುವಂತೆ ರಶಿಯಾ ಸರಕಾರ ಸೇನೆಗೆ ಸೂಚಿಸಿದೆ.
ಸೈನಿಕರ ಹೊರತಾಗಿ 102 ಉಕ್ರೇನ್ ನಾಗರಿಕರು ಸಾವಿಗೀಡಾದರು ಹಾಗೂ 304 ಜನ ಗಾಯಗೊಂಡಿದ್ದಾರೆ. 5 ಲಕ್ಷ ಜನ ಉಕ್ರೇನ್ ತೊರೆದು ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ. ಪಾಶ್ಚಾತ್ಯ ದೇಶಗಳ ವಿಮಾನ ಪ್ರವೇಶಕ್ಕೆ ರಶಿಯಾ ನಿಷೇಧ ವಿಧಿಸಿದೆ. ಯುಎಸ್‌ಎ ಮೊದಲಾದ 36 ಪಾಶ್ಚಾತ್ಯ ದೇಶಗಳು ರಶಿಯಾ ವಿಮಾನ ಪ್ರವೇಶ ತಡೆದಿವೆ.
ಉಕ್ರೇನಿನ ಎರಡನೇ ದೊಡ್ಡ ನಗರ ಖಾರ್ಕೀವ್‌ಗೆ ರಶಿಯಾ ನುಗ್ಗಿದೆ. ಯುದ್ಧ ವಿರಾಮದ ಮಾತುಕತೆ ಫಲ ನೀಡಿಲ್ಲ.