ಬೆಳ್ಳಾರೆಯಲ್ಲಿ ಕೊಲೆಯಾದ ನೆಟ್ಟಾರು ಪ್ರವೀಣ್ ಪೂಜಾರಿ ಶವ ಇಟ್ಟು ರಾಜಕೀಯ ಮಾಡಲು ನೋಡಿದ ಬಿಜೆಪಿ ನಾಯಕರಾದ ನಳಿನ್ ಕುಮಾರ್ ಕಟೀಲ್, ಸಚಿವ ಅಂಗಾರ, ಮಂತ್ರಿ ಸುನೀಲ್ ಕುಮಾರ್, ಶಾಸಕ‌ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಸಂಘದ ಕಲ್ಲಡ್ಕ ಪ್ರಭಾಕರಿಗೆ ಘೇರಾವೋ ಮಾಡಿದ ಬಿಜೆಪಿ ಕಾರ್ಯಕರ್ತರು ನಾಯಕರಿಗೆ ಹಾಗೂ ಬಿಜೆಪಿ ಸರಕಾರಕ್ಕೆ ಧಿಕ್ಕಾರ ಕೂಗಿದರು. 

ಕೆಲವರು ನಳಿನ್‌ರ ಕಾರನ್ನು ಮಗುಚಲು ನೋಡಿದರು. ಗಲಾಟೆ ಉದ್ವಿಗ್ನತೆ ಹಬ್ಬುವುದನ್ನು ಕಂಡ ಪೋಲೀಸರು ಲಾಠಿ‌ ಬೀಸಿದರು. ಮೂವರು ಗಾಯಗೊಂಡರು. ಬಿಜೆಪಿ ನಾಯಕರು ಮೆಲ್ಲ ಜಾಗ ಕಾಲಿ ಮಾಡಿದರು ಎನ್ನಲಾಗಿದೆ.

ಈ ನಡುವೆ ಮೃತರ ಪತ್ನಿ ನೂತನಾ ಅವರು ಸರಿಯಾದ ಹೇಳಿಕೆ ನೀಡಿದ್ದಾರೆ. ನನ್ನ ಗಂಡನ ಅಂಗಡಿಗಳ ಪಕ್ಕದಲ್ಲಿ ಮುಸ್ಲಿಂ ಅಂಗಡಿಗಳೇ ಇವೆ. ಅವರೆಲ್ಲ‌ ಸೌಹಾರ್ದದಿಂದ ಇದ್ದಾರೆ. ಅವರು ಯಾರ ದ್ವೇಷವನ್ನೂ ಕಟ್ಟಿಕೊಂಡಿಲ್ಲ. ಇತ್ತೀಚೆಗೆ ಕೊಲೆಯಾದ ಮಸೂದ್ ಕೊಲೆಗೆ ಪ್ರತಿಕ್ರಿಯೆ ಆಗಿ ಈ ಕೊಲೆ ನಡೆದಿದೆ ಎಂದು ನಾನು ನಂಬುವುದಿಲ್ಲ. ನನ್ನ ಗಂಡ ಎಲ್ಲ ಧರ್ಮದವರಲ್ಲಿ ಚೆನ್ನಾಗಿಯೇ ಇದ್ದಾರೆ. ಹೆಣದ ರಾಜಕೀಯ ನಮಗೆ ಬೇಕಾಗಿಲ್ಲ. ನಮಗೆ ನ್ಯಾಯ ಬೇಕು ಅಷ್ಟೆ. ನನ್ನವರ ಕೊಲೆಯ ಅವರ ಪರಿಚಿತರು ಇಲ್ಲವೇ ಗೆಳೆಯರಿಂದ ಆಗಿಲ್ಲ ಎಂದು ಹೇಳುತ್ತೇನೆ ಎಂದು ನೂತನಾ ಹೇಳಿದರು.