ಪುತ್ತೂರು : ಕಾರ್ಗಿಲ್ ಯುದ್ಧದ ವಿಜಯವೆಂದರೆ ಅದು ನಮ್ಮ ನೆಲದ ಮೇಲೆ ಆಕ್ರಮಣ ಮಾಡಿದ ದುಷ್ಯರ ವಿರುದ್ಧದ ಜಯ. ಕಾರ್ಗಿಲ್ ಯುದ್ದವೆಂದರೆ ಅದು ಅತ್ಯಂತ ವಿಶಿಷ್ಟ ಯುದ್ಧ, ಸಮತಟ್ಟಾದ ನೆಲದಮೇಲೆ ನಡೆದ ಯುದ್ಧವಲ್ಲ. ಭಾರತ ಮತ್ತು ಪಾಕಿಸ್ಥಾನದ ನಡುವಣ ಗಡಿ ರೇಖೆಯ ಉದ್ದಕ್ಕೂ ಹರಡಿಕೊಂಡ ಪರ್ವತಪಂಕ್ತಿ, ಹದಿನೆಂಟು ಸಾವಿರ ಅಡಿಗಳ ಎತ್ತರದ ಗಿರಿ ಶಿಖರಗಳ ಮೇಲೆ ನೆಲೆಯೂರಲು ಬಂದ ಪಾಕಿಸ್ತಾನದ ಸೈನಿಕರು. ಶತ್ರು ಸೇನೆ ಎತ್ತರದಲ್ಲಿ ಭಾರತೀಯ ಯೋಧರು ಕೆಳಗೆ ಹಿಂಜರಿಯಲಿಲ್ಲ. ಪ್ರತಿಕೂಲ ಸನ್ನಿವೇಶ ಶತ್ರುಗಳನ್ನು ಸದೆಬಡಿಯುವಲ್ಲಿ ನಮ್ಮ ಸೈನಿಕರು ಪ್ರದರ್ಶಿಸಿದ ಅಸೀಮ ಕೆಚ್ಚು ಪದಗಳಿಗೆ ನಿಲುಕದು. ಕಾರ್ಗಿಲ್ ವಿಜಯ ನಮ್ಮ ಸೇನೆಯ ಶಕ್ತಿ, ಸಾಮಥ್ರ್ಯದ ಪ್ರತೀಕ ,ಅಲ್ಲಿ ಗಡಿಯಲ್ಲಿ ಯೋಧರು ಗಡಿಕಾಯುತ್ತಿದ್ದಾರೆ. ಹಾಗಾಗಿ ನಾವು ಇಲ್ಲಿ ನಿಶ್ಚಿಂತೆಯಲ್ಲಿದ್ದೇವೆ ಅನ್ನುವ ಅಂಶವನ್ನು ಸದಾ ನೆನಪಿನಲ್ಲಿಡಬೇಕು ಎಂದು ಭಾರತೀಯ ವೈಮಾನಿಕ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಯೋಧ ಸಾರ್ಜೆಂಟ್ ಶ್ಯಾಮಪ್ರಸಾದ್ ದೇವಸ್ಯ ಹೇಳಿದರು. ಅವರು ಸಂತಫಿಲೋಮಿನಾ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸದ ಸ್ಮರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದರೆ ವ್ಯಕ್ತಿಯ ನಡೆ, ನುಡಿಯಲ್ಲಿ, ಒಟ್ಟು ವ್ಯಕ್ತಿತ್ವದಲ್ಲಿ ಬದಲಾವಣೆ ಗೋಚರಿಸುತ್ತದೆ. ಭ್ರಷ್ಟಾಚಾರ ಕಡಿಮೆಯಾಗಲು, ನಮ್ಮ ದೇಶದ ಬಗೆಗೆ ಅಭಿಮಾನ ಮೂಡಲು, ಧರ್ಮ, ಜಾತಿಯ ಸೀಮಿತ ಚಿಂತನೆಯಿಂದ ಹೊರಬರಲು ಸೇನೆಯಲ್ಲಿ ಕೆಲವು ವರ್ಷಗಳ ಕಡ್ಡಾಯ ಸೇವೆ ಮಾಡಬೇಕೆನ್ನುವ ಕಾಯದೆ ಬರಬೇಕು. ನಮ್ಮ ನೆಲವನ್ನು ಪ್ರೀತಿದದೇ ಇರುವಾತ ದೇಶಕ್ಕೆ ಅಪಾಯಕಾರಿ ಎಂದು ಹೇಳಿದ ಅವರು ಅಗ್ನಿಪಥ್ ಯೋಜನೆ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಸೇರಿ ತಮ್ಮ ಬದುಕನ್ನು ಸಾಥ್ರ್ಯಕ್ಯ ಮಾಡಬೇಕೆಂದು ಸಾರ್ಜೆಂಟ್ ಶ್ಯಾಮಪ್ರಸಾದ್ ಕರೆ ನೀಡಿದರು.
ಕಾಲೇಜಿನ ಆಂತರಿಕ ಗುಣಪಟ್ಟ ಕೋಶದ ನಿರ್ದೇಶಕರಾದ ಡಾ|ಎ.ಪಿ.ರಾಧಾಕೃಷ್ಣ, ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಗ್ರೆನೇಡಿಯರ್ ಯೋಗೇಂದರ್ ಯಾದವ್ ಮೊದಲಾದ ಯೋಧರ ಬಲಿದಾನವ ಯುವಶಕ್ತಿಯ ಅಗಾಧ ಸಾಧ್ಯತೆಯ ಪ್ರತೀಕ ಯುದ್ಧ, ಹಿಂಸೆಯಿಲ್ಲದ ಸಮಾಜದ ನಿರ್ಮಾಣವಾಗಲು ಯುವಶಕ್ತಿಯಿಂದಷ್ತೇ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಅಹಿಸಿದ ಪ್ರಾಂಶುಪಾಲ ರೆ|ಫಾ|ಎಂಟೋನಿ ಪ್ರಕಾಶ್ ಮಂತೆರೋ ಮಾತನಾಡುತ್ತ, ಕಾರ್ಗಿಲ್ ವಿಜಯ ದಿವಸದ ಆಚರಣೆ ಎಂದರೆ ನಮ್ಮ ಗಡಿಯ ಬಗೆಗೆ ಎಚ್ಚರಿಕೆ ಮತ್ತು ಗಡಿ ಕಾಯುತ್ತಿರುವ ಯೋಧರ ಕುರಿತು ನಾವು ಕೃತಜ್ನತೆ ಸಲ್ಲಿಸುವ ಸಮಯ. ಸಮಾಜದ ವ್ಯಕ್ತಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಒಂದು ವರ್ಗ ತನ್ನ ಕುರಿತು ಮಾತ್ರ ಆಲೋಚಿಸುತ್ತಾ ಭ್ರಷ್ಟ ಜೀವನ ನಡೆಸುವ ಮೂರ್ಖರು, ಎರಡನೇಯ ವರ್ಗದವರು ಧರ್ಮ, ಜಾತಿಗಳನ್ನು ನೆಚ್ಚಿಕೊಂಡು ಅದಕ್ಕಾಗಿಯೇ ಬಾಳುವ ಸಂಸ್ಕೃತಿ ಹೀನರು, ಮೂರನೇಯವರು ಸಮಾಜ ಹಿತವನ್ನು ಕಾಯುವ ಲೋಕಮಾನ್ಯರು. ಯೋಧರು ಮೂರನೇಯ ವರ್ಗಕ್ಕೆ ಸೇರುವವರು, ತಮ್ಮ ತಾಯ್ನೆಲಕ್ಕಾಗಿ ಜೀವನವನ್ನು, ಜೀವವನ್ನು ಸಮರ್ಪಿಸುವ ಯೋಧರು ದಿವ್ಯಾತ್ಮರು ಅವರು ನಮಗೆ ಆದರ್ಶವಾಗಬೇಕು ಎಂದರು.