ಮಂಗಳೂರು, ಜು 28: ಪ್ರವೀಣ್ ನೆಟ್ಟಾರ್ ಹತ್ಯೆ ದೇಶ ಭಕ್ತರಾದ ನಮಗೆಲ್ಲ ನೋವು ತಂದಿದೆ. ಒಂದು ವಿಶೇಷ ತನಿಖಾ ದಳ ರಚಿಸಿ, ವಿಶೇಷವಾಗಿ ಎಸ್‌ಪಿ ಒಬ್ಬರನ್ನು ನೇಮಿಸಿ ಪ್ರತ್ಯೇಕ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಯೋಜಕರಾದ ಸುನೀಲ್ ಕೆ. ಆರ್. ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
ನಿನ್ನೆ ಬೆಳ್ಳಾರೆಯಲ್ಲಿ ಅಮಾಯಕ ಕಾರ್ಯಕರ್ತರ ಮೇಲೆ ಪೋಲೀಸರು ಲಾಠಿ ಬೀಸಿದ್ದಾರೆ. ಅವರನ್ನು ಗುರುತಿಸಿ ಅಮಾನತು ಮಾಡಬೇಕು ಎಂದು ಬಜರಂಗ ದಳ ಆಗ್ರಹಿಸುತ್ತದೆ ಎಂದು ಅವರು ಹೇಳಿದರು.
ದೇಶ ಭಕ್ತರು ಎಲ್ಲ ತಾಲೂಕು ಕೇಂದ್ರಗಳಲ್ಲಿ ನಾಳೆಯಿಂದ ಪ್ರವೀಣ್ ಕೊಲೆಯ ವಿರುದ್ಧ ಶ್ರದ್ಧಾಂಜಲಿ ಸಭೆ ನಡೆಸಲಿದೆ. ಆಕ್ರೋಶಿತ ಹಿಂದೂ ಸಮಾಜದ ಸಿಟ್ಟು ಇದು. ಕೊಲೆಗಾರರು ಕೇರಳ ಕಡೆಯಿಂದ ಬಂದಿದ್ದರು ಎನ್ನಲಾಗಿದೆ. ರಾಷ್ಟ್ರೀಯತೆ ಮತ್ತು ಧರ್ಮದ ಪರವಾಗಿ ಕೆಲಸ ಮಾಡುವ ನಮಗೆ ನೋವಾಗಿದೆ. ಪ್ರವೀಣ್ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಸುನೀಲ್ ಹೇಳಿದರು.
ವಿಶೇಷ ತನಿಖಾ ತಂಡ ಹಾಗೂ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಎಂಬ ಬೇಡಿಕೆ ಇದೆ. ಅದನ್ನೂ ನಾವು ಸ್ವಾಗತಿಸುವುದಾಗಿ ಅವರು ಹೇಳಿದರು.
ಮತಾಂದರಿಂದ, ಜಿಹಾದಿಗಳು ಏಳು ಜನರಿಂದ ಈ ಕೊಲೆಯು ನಡೆದಿದೆ ಎಂಬ ಮಾಹಿತಿ ನಮಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುರಳಿಕೃಷ್ಣ ಹಸಂತಡ್ಕ, ಭುಜಂಗ ಕುಲಾಲ್, ಭರತ್ ಕುಂಡೇಲ್, ಪುನೀತ್ ಅತ್ತಾವರ ಉಪಸ್ಥಿತರಿದ್ದರು.