ಕರ್ನಾಟಕ ಕೊಂಕ್ಣಿ ಸಾಹಿತ್ಯ ಆಕಾಡೆಮಿ ಹಾಗೂ ವೀಜ್ ಕೊಂಕಣಿ ಅಮೇರಿಕ ಇವರ ಸಹಯೋಗದಲ್ಲಿ Int’l E-ಕೊಂಕಣಿಭಾಸ್ ಆನಿ ಸಂಸ್ಕೃತಿ ಹಾಗೂ E-ಸಂವಹನ Conversational Konkani ಎನ್ನುವ ಎರಡು ಸರ್ಟಫೀಕೆಟ್ ಕೋರ್ಸುಗಳ ಸಮಾರೋಪ ಸಮಾರಂಭವನ್ನು online ಮುಖಾಂತರ ಇತ್ತೀಚೆಗೆ ಸಂತ ಅಲೋಶಿಯಸ್ ಕಾಲೇಜಿನ ಸಾರಥ್ಯದಲ್ಲಿ ಹಮ್ಮಿಕೊಳ್ಳಲಾಯಿತು.
ಕೇಂದ್ರ ಸಾಹಿತ್ಯ ಆಕಾಡೆಮಿ ಪುರಸ್ಕೃತ ಆರ್ ಎಸ್ ಭಾಸ್ಕರ್, ಕೇರಳ ಹಾಜರಿದ್ದು, ‘E-ತುಪೆಂ’ಎನ್ನುವ ಡಿಜಿಟಲ್ ಪತ್ರಿಕೆಯನ್ನು ಉದ್ಘಾಟಿಸಿ ತಮ್ಮ ಸಂದೇಶವನ್ನು ನೀಡಿದರು. ಇ ಪತ್ರಿಕೆ ವಿದ್ಯಾರ್ಥಿಗಳಿಂದ, ತಯಾರದದ್ದು ಇದರ ಪರಿಚಯವನ್ನು ಸಂಪಾದಕ ಆಸ್ಟಿನ್ ಡಿ’ಸೋಜ ಪ್ರಭು ಸಭೆಗೆ ಮಾಡಿಕೊಟ್ಟರು.
ಕ.ಕೊಂ.ಸಾ.ಆ. ಅಧ್ಯಕ್ಷರು ಹಾಜರಿದ್ದು, ಸಂತ. ಅಲೋಶಿಯಸ್ ಕಾಲೇಜಿನ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕಾಲೇಜಿನ ಪ್ರಾಶುಂಪಾಲರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ.ತಮ್ಮ ಅಧ್ಯಕ್ಷೀಯ ಭಾಷಣ ನೀಡಿದರು. ಕಾಲೇಜಿನ ರೆಜಿಸ್ಟ್ರಾರ್ ಡಾ.ಆಲ್ವಿನ್ಡೆ’ಸಾ ಪ್ರಸ್ತಾವನೆಗೈಯುತ್ತಾ ಸ್ವಾಗತಿಸಿದರು. ಸರ್ಟಿಫೀಕೆಟ್ ಕೋರ್ಸಿನ ವಿದ್ಯಾರ್ಥಿಗಳಾದ ಸುನೀತ ರೊಡ್ರಿಗಸ್ ಸೌದಿ ಅರೇಬಿಯ,ಮರಿಯ ಮಥಾಯಸ್ ಉಡುಪಿ ಹಾಗೂ ಊರ್ವಶಿ ನಾಯಕ್ಗೋವ ತಮ್ಮ ಅನುಭವಗಳನ್ನು ಇ ಸಂದರ್ಭದಲ್ಲಿ ಹಂಚಿಕೊಂಡರು. ಸರ್ಟಿಫೀಕೆಸರ್ಟಫೀಕೆಟ್ ಕೋರ್ಸಿನ ಯಶಸ್ಸಿಗೆ ಕಾರಣರಾದ ಎಲ್ಲಾರನ್ನು ಸಂಯೋಜಕಿ ಫ್ಲೋರ ಕಾಸ್ತೆಲಿನೊ ವಂದಿಸಿದರು. ಕು. ನಮ್ರತ ಕಿಣಿ ಕೇರಳ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿಕೊಟ್ಟರು.