ಮಂಗಳೂರಿನ ಅಮೃತ ವಿದ್ಯಾಲಯಂ ಶಾಲೆಯಲ್ಲಿ ದಿನಾಂಕ 26 /2/20222ರಂದು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಇವರ ಜಂಟಿ ಆಶ್ರಯದಲ್ಲಿ ಆಝದಿಕಾ ಅಮೃತ ಮಹೋತ್ಸವದ 75ನೇ ವರ್ಷದ ಸ್ಮರಣಾರ್ಥಕ ವಾಗಿ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ ನಮ್ಮ ಶಾಸಕರಾದಂತಹ ಶ್ರೀ ವೇದವ್ಯಾಸ ಕಾಮತ್
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆದಂತಹ ಪ್ರೇಮಾನಂದ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿರುವ ಅಕ್ಷಯ್ ಶ್ರೀಧರ್ ಹಾಗೂ ಸ್ಥಳೀಯ ಕಾರ್ಪೊರೇಟರ್ ಆಗಿರುವಂತಹ ಶ್ರೀ ಜಗದೀಶ್ ಶೆಟ್ಟಿ, ಶಾಲಾ ಸಂಚಾಲಕಿ ಯಾಗಿರುವ ಸಂಪೂಜ್ಯ ಮಂಗಳಾಮೃತ ಪ್ರಾಣ, ಶಾಲಾ ಪ್ರಾಂಶುಪಾಲೆ ಶ್ರೀಮತಿ ಡಾ. ಆರತಿ ಶೆಟ್ಟಿ, ಅಮೃತ ಕ್ಯಾಂಪಸ್ಸಿನ ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಅಭಿಯಂತರು ಆದಂತಹ ದೀಪ್ತಿ, ಆರೋಗ್ಯ ಅಧಿಕಾರಿ ಡಾ.ಮಂಜಯ್ಯ ಶೆಟ್ಟಿಬೆಲೂನ್ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಿಗಾಗಿ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶನಿವಾರದಂದು ಹಿರಿಯ ವಿಭಾಗದ ಮಕ್ಕಳಿಗಾಗಿ ನಿಧಾನಗತಿಯ ಸೈಕಲ್ ಓಟ, ಮುಖಕ್ಕೆ ಬಣ್ಣ ಹಚ್ಚುವುದು, ಆಶುಭಾಷಣ, ದೇಶಭಕ್ತಿ ಗೀತೆ, ಏಕಪಾತ್ರಾಭಿನಯ, ಅಣುಕು ಅಭಿನಯ, ಮಣ್ಣಿನಿಂದ ಮಾದರಿ ರಚನೆ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಭಾನುವಾರದಂದು ಕಿರಿಯ ವಿಭಾಗ ಮತ್ತು ಪುಟಾಣಿ ವಿಭಾಗದ ಮಕ್ಕಳಿಗಾಗಿ ಛದ್ಮವೇಷ, ದೇಶಭಕ್ತಿ ಗೀತೆ, ಸ್ಮರಣಶಕ್ತಿ ಆಟ, ಡ್ರಾಯಿಂಗ್, ಕಥೆ ಹೇಳುವುದು, ಮುಂತಾದ ಸ್ಪರ್ಧೆಗಳು ನಡೆಯಲಿವೆ.
ಈಗಾಗಲೇ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ನೋಂದಾವಣಿ. ಕಾರ್ಯಕ್ರಮದ ನಿರೂಪಣೆಯನ್ನು ನೈನಾ ಜಿ.ಶೆಟ್ಟಿ ನಡೆಸಿಕೊಟ್ಟರು. 25 ಕ್ಕಿಂತಲೂ ಹೆಚ್ಚು ಶಾಲೆಯ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲಾ ಶಿಕ್ಷಕರು, ಶಿಕ್ಷಕೇತರರ ವೃಂದ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.