ಮಂಗಳೂರು - ಫೆ. ದಿನಾಂಕ 27 ರ ಇಳಿಹಗಲು ಅಡ್ಯನಡ್ಕದ ಜನತಾ ವಿದ್ಯಾ ಸಂಸ್ಥೆಯ ಶ್ರೀ ಕೃಷ್ಣ ಸಭಾಂಗಣದಲ್ಲಿ ಜನಪ್ರಿಯ ಶಿಕ್ಷಕರಾಗಿದ್ದ ಮಣಿಮುಂಡ ಕೃಷ್ಣ ಉಪಾಧ್ಯಾಯರ ಸ್ಮರಣ ಸಂಚಿಕೆ ಕೃಷ್ಣಾರ್ಪಣ ಕೃ ತಿಯ ಲೋಕಾರ್ಪಣೆ ಸಮಾರಂಭವು ಖ್ಯಾತ ವೈದ್ಯ ಹಾಗೂ ಅರ್ಥದಾರಿ ಡಾ ರಮಾನಂದ ಬನಾರಿಯವರ ದಿವ್ಯ ಹಸ್ತದಿಂದ ನೆರವೇರಿತು.

ಅವರು ಮಾತನಾಡುತ್ತಾ "ಒಬ್ಬ ವ್ಯಕ್ತಿ ಯ ಜನಪ್ರಿಯತೆ ಹಾಗೂ ಆದರ್ಶಗಳ ಮೌಲ್ಯಮಾಪನಕ್ಕೆ ಇಂದು ಈ ಕೃತಿ ಲೋಕಾರ್ಪಣೆ ಸಮಾರಂಭವು ಕಿಕ್ಕಿರಿದ ಜನಸಂದಣಿಯಿಂದ ಕೂಡಿರುವುದೇ ಸಾಕ್ಷಿ.ಈ ರೀತಿಯ ಸಭೆಯನ್ನು ತಾನು ಯಾವುದೇ ಕೃತಿ ಬಿಡುಗಡೆಯಲ್ಲಿ ಕಂಡಿಲ್ಲ".ಅಂತಹ ಮೇರು ವ್ಯಕ್ತಿತ್ವದ ಉಪಾಧ್ಯಾಯರ ಶಿಷ್ಯನಾಗಿದ್ದ ತಾನು ಈ ಗ್ರಂಥದ ಲೋಕಾರ್ಪಣೆ ಮಾಡುವಂತಾದುದು ತನ್ನ ಸೌಭಾಗ್ಯ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಅವರ ಶ್ರೀ ಮತಿ ಲಕ್ಷ್ಮೀ ಉಪಾಧ್ಯಾಯರ ಸಹ ಭಾಗಿತ್ವವನ್ನು ಕೊಂಡಾಡಿದರು.

ಅಡ್ಯನಡ್ಕದಲ್ಲಿರುವ ಜನತಾ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾಗಿರುವ ವಾರಣಾಶಿ ಅಶ್ವಿನಿ ಕೃಷ್ಣಮೂರ್ತಿ ಯವರ ಘನ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಅವರು "ಶ್ರೀಯುತರ ಜನಹಿತ ಕಾರ್ಯಗಳೂ ಅವರು ಹೇಗೆ ಇತರ ಶಿಕ್ಷಕರ  ಬದುಕಿಗೆ ಮಾದರಿಯಾಗ ಬಲ್ಲರು" ಎಂಬುದನ್ನು ಎಳೆ ಎಳೆಯಾಗಿ ವಿಶ್ಲೇಷಿಸಿದರು.

ವಿಶ್ರಾಂತ ಪ್ರಾಚಾರ್ಯ ಬೊಳಂತಿ‌ಮೊಗರು ಈಶ್ವರ ಭಟ್ಟರು ಕೃಷ್ಣ ಉಪಾಧ್ಯಾಯರ ಅಂದಿನ ಸಹಭಾಗಿತ್ವದ ಘನಾತ್ಮಕ ಅಂಶಗಳನ್ನು ಹಾಗೂ ಅದೇ ಸ್ವಭಾವದ ಅವರ ಕುಟುಂಬಸ್ತರನ್ನೂ ಶ್ಲಾಘಿಸಿದರು.

ಖ್ಯಾತ ಪತ್ರಿಕೋದ್ಯಮಿ ಪಿ.ನಾರಾಯಣ ಶೆಟ್ಟರು ಕೃತಿಯ ಸಮಗ್ರ ಪರಿಚಯ ಮಾಡಿಸಿದರು.

ಸ್ಮರಣ ಸಂಚಿಕೆಯ  ಸಂಪಾದಕ ಡಾ ಸುರೇಶ ನೆಗಳಗುಳಿಯವರು ಮಾತನಾಡಿ ತಮ್ಮ ಭಾವನೂ ಆಗಿರುವ ಶ್ರೀ ಯುತರ ಜೀವನಾವಧಿಯ ಚರ್ಯೆಗಳ ಅನಾವರಣವನ್ನು ನೂರಾರು ಹಳೆ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ,ಬಂಧುಮಿತ್ರರೂ ಮಾಡಿದ್ದಾರೆ. ಆದ್ದರಿಂದ ಈ ಗ್ರಂಥವು ಮೌಲ್ಯಾತೀತವಾಗಿದೆ ಮತ್ತು ಇದನ್ನು ಓದಿದವರು ತಮ್ಮ ಜೀವನದ ಹಾದಿಯಲ್ಲಿ ಅನುಸರಿಸಬಹುದಾದ ಮಾರ್ಗದರ್ಶಕ ಅಂಶಗಳು ಹಲವರಿಗೆ ದಾರಿದೀಪವಾಗ ಬಹುದು ಎಂದರು.

ಪುತ್ರ ಡಾ ರಾಜಶೇಖರ ಮಣಿಮುಂಡ ಅವರು ಬನಾರಿಯವರು ತನ್ನ ತಂದೆಯ ಶಿಷ್ಯನಾಗಿ ಉದ್ಧರಿಸಿದ ಮಾತುಗಳ ವ್ಯಾಖ್ಯಾನ ಮಾಡಿದರು.

ಈ ಕೃತಿ ಲೋಕಾರ್ಪಣೆಯ ಉದ್ದೇಶ ಹಾಗೂ ತನ್ನ ತಂದೆಯವರ ಆದರ್ಶಗಳನ್ನು ಪ್ರತಿಪಾದಿಸುವ ಪ್ರಸ್ತಾವಿಕ ನುಡಿಗಳನ್ನು ಹಿರಿಯ ಪುತ್ರ ವಿಶ್ರಾಂತ ಮುಖ್ಯೋಪಾಧ್ಯಾಯ ಭಾಸ್ಕರ ಉಪಾಧ್ಯಾಯರು ಮಾರ್ಮಿಕವಾಗಿ ವಿಶ್ಲೇಷಿಸಿದರು.

ಅತ್ಯಂತ ವಿಶದವಾಗಿ ಕಾರ್ಯಕ್ರಮ ನಿರೂಪಣೆ ಗೈದ ಹಳೆ ವಿದ್ಯಾರ್ಥಿ ಯಕ್ಷಗಾನ ಪಟು ಶ್ರೀ ಉಜಿರೆ ಅಶೋಕ‌ಭಟ್ಟರು ಉಪಾಧ್ಯಾಯ ಮಾಸ್ತರ್ ರವರ ಬಗ್ಗೆ ಬಹಳ ಸುಂದರವಾಗಿ ಗುಣಗಾನ ಮಾಡಿದರು.

ಲಯನ್ ನೆಗಳಗುಳಿ ತಿರುಮಲರಾಜ ಅವರ ಧನ್ಯವಾದ ಸಮರ್ಪಣೆ ಯ ನಂತರ ಮಣಿಮುಂಡ ಮನೆತನದ ಶ್ರೀಮತಿ ರೋಶನಿ ಮಹೇಶ ಉಪಾಧ್ಯಾಯ ಮತ್ತು ಬಳಗದವರ ಸಂಗೀತ ವಿಧುಶಿ ಯವರ ಕರ್ನಾಟಕ ಸಂಗೀತ ಕಾರ್ಯಕ್ರಮ ಸಹಿತವಾಗಿ ಸಮಾರಂಭ ಮುಕ್ತಾಯವಾಯಿತು.

ಡಾ ಸತ್ಯಪ್ರಕಾಶ ಮಣಿಮುಂಡ, ದೂರದರ್ಶನ ಕಲಾವಿದೆ ರಶ್ಮೀ ಅಭಯ ಸಿಂಹ, ಸಿನಿಮಾ ದಿಗ್ದರ್ಶಕ ಅಭಯಸಿಂಹ,ಅಶೋಕ‌ವರ್ಧನ,ಶ್ರದ್ಧಾ ಮಣಿಮುಂಡ, ನೆಗಳಗುಳಿ ಮಹಾಬಲೇಶ್ವರ ಭಟ್,ನೆಗಳಗುಳಿ ಕೃಷ್ಣ ಭಟ್, ಸುಶೀಲಾ ಪಾತನಡ್ಕ,ವಿ.ಮಾ ಭಟ್,ಸುಬ್ರಾಯ ಭಟ್,ಡಾ ನಾರಾಯಣ ಭಟ್, ಪತ್ರಕರ್ತ ರೇಮಂಡ್ ಡಿ‌ಕುನ್ಹಾ, ಪತ್ರಿಕೋದ್ಯಮಿ ಡಾ ಶೇಖರ್ ಅಜೆಕಾರು, ಮರಕಿಣಿ ಕೃಷ್ಣ ಭಟ್ ಸತ್ಯವತಿ ಕೊಳಚಿಪ್ಪು ಮತ್ತು ಅನೇಕ ಹಿರಿಯ ಕಿರಿಯ ಪ್ರಸಿದ್ಧ ಆತ್ಮೀಯರು ಉಪಸ್ಥಿತರಿದ್ದರು.