ಮಂಗಳೂರುಃ ಹರ್ಡೀಕರ್ ಅವರಿಂದ ಸ್ಥಾಪಿತವಾಗಿ ಜವಾಹರ ಲಾಲ್ ನೆಹರೂ ಮುನ್ನಡೆಸಿದ ಕಾಂಗ್ರೆಸ್ ಸೇವಾದಳವು ಭಾರತ ರಾಷ್ಟರೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಶಿಸ್ತು ಸಂಯಮ ಸಂಘಟನಾ ಕೌಶಲ್ಯ ರೂಪಿಸುವ ಮೂಲಕ ಪಕ್ಷದ ಬೆನ್ನೆಲುಬಾಗಿ ಕಾರ್ಯನಿರ್ವಬಹಿಸುತ್ತಿದೆ ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.

ಅವರು ನಗರದ ಮಲ್ಲಿಕಟ್ಟೆ ಇಂದಿರಾ ಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸೇವಾದಳ ಕಾರ್ಯಕರ್ತರು ಕಾರ್ಯಕ್ರಮಗಳಲ್ಲಿ ಸಕಲ ವ್ಯವಸ್ಥೆ ಮಾಡುವವರು ಎಂಬ ಕಲ್ಪನೆ ಬೇಡ ಎಂದ ರಮಾನಾಥ ರೈ ಅವರು ಪಕ್ಷದ ಕಾರ್ಯಕರ್ತರಲ್ಲಿ ಶಿಸ್ತು ದಕ್ಷತೆ ಹೆಚ್ಚಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದರು.

ಸೇವಾದಳದ ವಲಯವಾರು ಐದು ದಿನಗಳ ತರಬೇತಿ ಶಿಬಿರ ಮೇ ತಿಂಗಳಲ್ಲಿ ನಡೆಯಲಿದ್ದು ಆಸಕ್ತರು ಭಾಗವಹಿಸುವಂತೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ರಾಮಚಂದ್ರ  ಪ್ರಕಟಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕಿಂ ಡಿ ಸೋಜ ಅವರ ನೇತೃತ್ವದಲ್ಲಿ ಜಿಲ್ಲಾ ಮತ್ತು ಬ್ಲಾಕ್ ಸಮಿತಿಗಳ  ಹೊಸ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಸೇವಾದಳ ಜಿಲ್ಲಾ ಸಮಿತಿಯ ನೇತೃತ್ವವಹಿಸಿದ್ದ ದಿವಂಗತ ಸುರೇಶ್ ಶೆಟ್ಟಿ ಅವರ ಪ್ರಾಮಾಣಿಕತೆ, ಸೇವ ಮನೋಭಾವ ಮತ್ತು ಸೇವಾದಳದೊಂದಿಗೆ ಅವರ ಸಂಬಂಧವನ್ನು ಸ್ಮರಿಸಲಾಯಿತು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶುಭೋದಯ ಆಳ್ವ, ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವಾಸಕುಮಾರ್ ದಾಸ್, ಜಿಲ್ಲಾ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಬಿಎಂ. ಅಬ್ಬಾಸ್ ಆಲಿ, ವೈದ್ಯಕೀಯ ಘಟಕದ ಅಧ್ಯಕ್ಷ ಡಾ.ಶೇಖರ್ ಪೂಜಾರಿ ಶುಭ ಹಾರೈಸಿದರು.

ಕಾರ್ಯಕರಮದಲ್ಲಿ ಕೆಪಿಸಿಸಿ ಸೇವಾದಳದ ಪದಾಧಿಕಾರಿ ಸಮೀರ್ ಪಜೀರ್, ತರಬೇತುದಾರರಾದ ವಿಶ್ವನಾಥ ಬಜಾಲ್, ಫಜಲ್ ರಹೀಂ ಪುತ್ತೂರು, ಗಿರಿಜಾ ಹೂಗಾರ್, ಮಕನಾಯಕ್ ಮತ್ತಿತರರು ಉಪಸ್ಥಿತರಿದ್ದರು.