ಡೀಸೆಲ್‌ ಸಗಟು ದರ ಏರಿಸಿದ ಎರಡು ದಿನಗಳ ಬಳಿಕ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್‌ ಚಿಲ್ಲರೆ ಮಾರಾಟ ಲೀಟರ್‌ ಬೆಲೆಯನ್ನು ತಲಾ 80 ಪೈಸೆ ಏರಿಸಿದವು.

ಕೊಲ್ಕತ್ತಾ, ಮುಂಬಯಿ, ಚೆನ್ನೈ ಮಹಾನಗರಗಳಲ್ಲಿ ಲೀಟರ್‌ ಪೆಟ್ರೋಲ್ ದರ ರೂ. 110.81 ಆಗಿದೆ.

14.2 ಕಿಲೋದ ಅಡುಗೆ ಸಿಲಿಂಡರ್ ಬೆಲೆಯನ್ನು ರೂ. 50 ಏರಿಸಿದ್ದು, ಈಗಿನ ಸಿಲಿಂಡರ್ ದರ ರೂ. 949.50. 5 ಕಿಲೋದ್ದು ರೂ. 349ಕ್ಕೆ ಮತ್ತು 10 ಕಿಲೋವಿನದ್ದು ರೂ. 669ಕ್ಕೆ ಏರಿಕೆಯಾಗಿದೆ.