ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸೆನ್ಸರ್ ಕಸದ ತೊಟ್ಟಿಗಳನ್ನು ಸ್ಥಾಪಿಸಿದ್ದಾರೆ. 24ಕ್ಕೆ ಯೋಜನೆ ಹಾಕಿದ್ದು 18 ಭೂಗತ ಕಸದ ತೊಟ್ಟಿಗಳು ಕಾರ್ಯಾರಂಭ ಮಾಡಿವೆ.
Image Courtesy: All About Belgum
ಹತ್ತು ಅಡಿ ನೆಲದಡಿ ಕಾಂಕ್ರೀಟಿನಿಂದ ಮಾಡಿದ ಕಸದ ತೊಟ್ಟಿ ಸೂರತ್ ಮೊದಲಾದೆಡೆ ಇವೆ. ಅದೇ ಮಾದರಿಯ ತೊಟ್ಟಿ ಕಟ್ಟಿರುವ ಅಭಯ ಪಾಟೀಲರು ಅದಕ್ಕೆ ಸೆನ್ಸರ್ ವ್ಯವಸ್ಥೆ ಮಾಡಿದ್ದಾರೆ. ಇದು ದೇಶದಲ್ಲೇ ಮೊದಲು.
ನೆಲ ಮಟ್ಟಕ್ಜೆ ಇರುವ ಈ ನೆಲದಡಿ ತೊಟ್ಟಿಯ ಮುಚ್ಚಳ ತೆಗೆದು ಕಸ ಸುರಿದು ಮುಚ್ಚಿದರಾಯಿತು. ಇದರ ಸೆನ್ಸರ್ ಕೆಲಸ ವಿಶೇಷವಾದುದು.
ಕಸ 70% ತುಂಬಿದರೆ ಕಸ ರವಾನಿಸುವ ವಾಹನದ ಚಾಲಕನಿಗೆ ಸಂದೇಶ ಹೋಗುತ್ತದೆ. 80% ತುಂಬಿದರೆ ವಾರ್ಡ್ ಸದಸ್ಯರಿಗೆ, 90% ತುಂಬಿದರೆ ಸಂಬಂಧಿಸಿದ ಅಧಿಕಾರಿಗೆ ಹಾಗೂ 100% ಕಸ ತುಂಬಿದರೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮಾಹಿತಿ ರವಾನಿಸುವ ಕೆಲಸವನ್ನು ಸೆನ್ಸರ್ ಮಾಡುತ್ತದೆ.
ಕಸ ತೆಗೆದು ಸಾಗಿಸಿದ ಮೇಲೆ ವಿಶೇಷ ಪ್ಲಶ್ ಮೂಲಕ ತೊಳೆಯುವ ವ್ಯವಸ್ಥೆಯೂ ಇದೆ.