ತಾಜ್‌ಮಹಲ್ ಚರಿತ್ರೆಯನ್ನು ತಿದ್ದಿ ಬರೆಯಲು ಸೂಚಿಸಬೇಕು ಎಂದು ಕೋರಿ ಸಲ್ಲಿಸಿದ್ದ ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾ ಮಾಡಿತು. ಸುರ್ಜಿತ್ ಸಿಂಗ್ ಎನ್ನುವವರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿ, ಆಗ್ರಾದ ತಾಜ್‌ಮಹಲ್ ಇತಿಹಾಸ ಬದಲಿಸಲು ಕೋರಿದ್ದರು.

ನ್ಯಾಯಾಧೀಶರುಗಳಾದ ಎಂ. ಆರ್. ಶಾ ಮತ್ತು ಸಿ. ಟಿ. ರವಿಕುಮಾರ್ ಅವರಿದ್ದ ಪೀಠವು ಆಗ್ರಾದ ತಾಜ್‌ಮಹಲ್ ಇತಿಹಾಸವನ್ನು ಜಗತ್ತು ಒಪ್ಪಿದೆ, ಅದು ಹಾಗೆಯೇ ಮುಂದುವರಿಯಲಿ ಎಂದು ಹೇಳಿದರು.