ವಾಯವ್ಯ ದಿಲ್ಲಿಯ ಜಹಾಂಗೀರ್ ಪುರಿ ಗಲಭೆ ಸಂಬಂಧ ಎಂಟು ಮಂದಿಯ ಜಾಮೀನು ಅರ್ಜಿ ತಿರಸ್ಕರಿಸಿದ ದಿಲ್ಲಿ ನ್ಯಾಯಾಲಯವು ಅಲ್ಲಿನ ಪೋಲೀಸರಿಗೆ ಛೀಮಾರಿ ಹಾಕಿತು.

ರಾಮ ನವಮಿಯಂದು ಅನುಮತಿ ಪಡೆಯದೆ ಮೆರವಣಿಗೆ ನಡೆಸಲಾಗಿದೆ. ಇನ್ಸ್‌ಪೆಕ್ಟರ್ ರಾಜೀವ್ ರಂಜನ್ ಸಹಿತ ಪೋಲೀಸರು ಅನುಮತಿಯಿಲ್ಲದೆ ಮೆರವಣಿಗೆ ಜೊತೆಗೆ ಸಾಗಿದ್ದಾರೆ. ಮುಸ್ಲಿಮರ ಜೊತೆ ಜಗಳ ಆಗುವಾಗಲೂ ಪೋಲೀಸರು ಸುಮ್ಮನಿದ್ದುದು ಕಂಡು ಬಂದಿದೆ. ಹಾಗೆಂದು ಕೋರ್ಟು ಪೋಲೀಸರಿಗೆ ಛೀಮಾರಿ ಹಾಕಿತು.

ಈ ಗಲಭೆ ಸಂಬಂಧ 20 ಜನರ ಬಂಧನ ಆಗಿದೆ.