ಜಮ್ಮು ಕಾಶ್ಮೀರದಲ್ಲಿ ಸದ್ಯ ವಿಧಾನ ಸಭೆ ಇಲ್ಲದಿರುವುದರಿಂದ ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿ ಸಂಸದರ ಮತ ಮೌಲ್ಯವು 700ಕ್ಕೆ ಇಳಿಯಲಿದೆ ಎಂದು ಹೇಳಲಾಗಿದೆ.
1957ರಲ್ಲಿ 496 ಇದ್ದ ಸಂಸದರ ಮತ ಮೌಲ್ಯವು 1997ರಿಂದ 708 ಆಗಿದೆ. ಜಮ್ಮು ಕಾಶ್ಮೀರವನ್ನು ವಿಭಜಿಸುವ ಮೊದಲು ಅಲ್ಲಿ 83 ಶಾಸಕರು ಇದ್ದರು. ಸದ್ಯ ವಿಧಾನ ಸಭೆ ಇಲ್ಲ. ಅಲ್ಲಿನ ಸಂಸದರಿಗೆ ಮತ ಚಲಾಯಿಸಲು ತೊಂದರೆ ಏನೂ ಇಲ್ಲ.
1974ರ ರಾಷ್ಟ್ರಪತಿ ಚುನಾವಣೆ ಕಾಲದಲ್ಲಿ 182 ಸದಸ್ಯ ಬಲದ ಗುಜರಾತ್ ವಿಧಾನ ಸಭೆ ವಿಸರ್ಜನೆ ಕಾರಣಕ್ಕೆ ಇರಲಿಲ್ಲ.