ಚಿತ್ರದುರ್ಗ ಜಿಲ್ಲೆಯ ಧರ್ಮಪುರದ ಕಣಿವೆ ಮಾರಮ್ಮನ ಜಾತ್ರೆಯು ಮೇ 7ರಿಂದ 13ರವರೆಗೆ ನಡೆಯುತ್ತಿದ್ದು, ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರ ಪಾತ್ರ ಮಹತ್ತರ ಆದುದಾಗಿದೆ.
ಇಲ್ಲಿನ 250 ಮುಸ್ಲಿಂ ಕುಟುಂಬದವರು ಮಾರಮ್ಮನಿಗೆ ಹರಕೆ ಹೊರುವುದರಿಂದ ಎಲ್ಲ ಕಾರ್ಯದಲ್ಲೂ ಕೈಕೂಡಿಸುತ್ತಾರೆ. ಪ್ರತಿದಿನ ಗೊಂಚಿಕಾರ ಮುಸ್ಲಿಂ ಕುಟುಂಬದಿಂದ ಮಾರಮ್ಮನಿಗೆ ಆರತಿ ನಡೆಯುತ್ತದೆ. ಮಾರಿ ಹೊರಡುವ ಕೆಲಸವೂ ಮುಸ್ಲಿಂ ಕುಟುಂಬದ್ದೇ ಆಗಿದೆ.