ಗುರುವಾರ ಮೇ 5ರ ಮುಂಜಾನೆ 5:35 ಗಂಟೆಗೆ ಕಾಶ್ಮೀರ ಕಣಿವೆಯಲ್ಲಿ ನೆಲನಡುಕ ಉಂಟಾಗಿ ಜನರೆಲ್ಲ ಭಯಭೀತರಾಗಿ ಹೊರಬಂದರು. ರಿಕ್ಟರ್ ಮಾಪಕದಲ್ಲಿ 5ರಷ್ಟಿದ್ದ ಭೂಕಂಪವು ಭಾರೀ ಹಾನಿ ಉಂಟು ಮಾಡಿಲ್ಲ.
2005ರ ಅಕ್ಟೋಬರ್ 8ರಂದು ನಡೆದಿದ್ದ ಭಯಂಕರ ನೆಲನಡುಕ ಎಲ್ಲರನ್ನು ಕ್ಷಣಕಾಲ ಕಾಡಿತು. 7.6 ತೀವ್ರತೆಯ ಆ ಭೂಕಂಪದಲ್ಲಿ ಗಡಿಯಾಚೀಚೆ 80,000 ಮಂದಿ ಸಾವಿಗೀಡಾಗಿದ್ದರು.