ಉಜಿರೆ: ನಂದಿ ರಥ ಮಂಗಳವಾರ ಧರ್ಮಸ್ಥಳಕ್ಕೆ ಆಗಮಿಸಿದಾಗ ಭವ್ಯ ಸ್ವಾಗತ ಕೋರಲಾಯಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನಂದಿ ರಥಕ್ಕೆ ಗೌರವಾರ್ಪಣೆ ಮಾಡಿ ಶುಭ ಹಾರೈಸಿದರು.
ಚಲನಚಿತ್ರ ನಟ ಹಾಗೂ ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋ ವಿಜೇತರಾದ ಪ್ರಥಮ್, ದೇವಳದ ಪಾರುಪತ್ಯಗಾರರಾದ ಲಕ್ಷಿö್ಮÃನಾರಾಯಣ ರಾವ್, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ, ದೇವಳದ ಸಿಬ್ಬಂದಿ ಹಾಗೂ ಭಕ್ತರು ಉಪಸ್ಥಿತರಿದ್ದರು.
ಕನ್ಯಾಡಿ ಮೂಲಕ ಉಜಿರೆಗೆ ರಥಯಾತ್ರೆ ಮುಂದುವರಿಯಿತು.