ಮಂಗಳೂರು / ಅತ್ತಾವರ : ಕಳೆದ ವರ್ಷ ಪೂಣೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂಲತಹ ಮಂಗಳೂರು ನಿವಾಸಿ ಡಾ| ಜೇಷಾ ರಿಮಿನ್ ರವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ರಕ್ತದಾನ ಶಿಬಿರವನ್ನು ತಾ| 11-09-2023ರಂದು ರೈಲ್ವೆ ಸ್ಟೇಷನ್ ರಸ್ತೆ ಅತ್ತಾವರ ಮಂಗಳೂರು ಇಲ್ಲಿನ ರಿಸರ್ವೆಷನ್ ಕೌಂಟರ್ ಮುಂಭಾಗವಿರುವ ಮಂಗಳೂರು ಕೊಂಕಣ ರೈಲ್ವೆ ಅಫೀಸಿ (KRIST) ನಲ್ಲಿ ಅಯೋಜಿಸಲಾಗಿತ್ತು.
ಶಿಬಿರವನ್ನು ಡಾ| ಜೇಷಾ ರಿಮಿನ್ ರವರ ಪೋಷಕರಾದ ಶ್ರೀಮತಿ ಮತ್ತು ಶ್ರೀ ಜೋನ್ ಥೋಮಸ್ ಹಾಗೂ ಶ್ರೀ ಜೇಷು ಜಾನ್ ಇವರು ಅಯೋಜನೆ ಮಾಡಿದರು.
ಶಿಬಿರದಲ್ಲಿ 60ಕ್ಕೂ ಹೆಚ್ಚು ದಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು. ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪಲಕ್ ,ಹಾಗೂ ಉಸ್ತುವಾರಿಗಳಾದ ಆಂಟೋನಿ ಡಿ"ಸೋಜ ಮತ್ತು ಅಶೋಕ್ ರವರ ನೇತ್ರತ್ವದಲ್ಲಿ ನಡೆದ ಈ ಶಿಬಿರದಲ್ಲಿ. ವೆನ್‌ಲಾಕ್ ಆಸ್ಪತ್ರೆಯ ಸಿಬ್ಬಂದಿಗಳು ಸಹಕರಿಸಿದರು. ಶಿಬಿರ ಸಂಘಟನೆಯ ಪ್ರಮುಖರಾದ ರಿಮಿನ್, ಭರತ್, ಬಿನಿಲ್ ಹಾಗೂ ಮ್ಯಾಥ್ಯೂಸ್ ಉಪಸ್ಥಿತರಿದ್ದರು.