ಕಜಕಸ್ತಾನದ ಅಲ್ಮಾತಿಯಲ್ಲಿ ನಡೆದ ಫಿಡೆ ವಿಶ್ವ ಬ್ಲಿಟ್ಜ್ ಚೆಸ್‌ನಲ್ಲಿ ಭಾರತದ ಕೊನೇರು ಹಂಪಿ ಬೆಳ್ಳಿ ಗೆದ್ದರು. ರಿಯಾಪಿಡ್ ಚೆಸ್‌ನಲ್ಲಿ ಚಿನ್ನ ಗೆದ್ದ ಹಂಪಿ ಇದರಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟರು.
Image Courtesy: News On AIR
ಕೊನೆರು ಹಂಪಿ 12.5 ಅಂಕ ಗಳಿಸಿದರು. 13 ಅಂಕ ಪಡೆದ ಕಜಕಸ್ತಾನದ ಬಿಬಿಸರ ಬಲಬಯೇವಾ ಚಿನ್ನ ಪಡೆದರು. ಭಾರತದ ದ್ರೋಣವಲ್ಲಿ ಹರಿಕಾ ಪದಕ ಗೆಲ್ಲದಿದ್ದರೂ ಉತ್ತಮ ಸಾಧನೆ ತೋರಿದರು.
ಇದೇ ಫಿಡೆ ಮುಕ್ತ ಪುರುಷರ ವಿಭಾಗದಲ್ಲಿ ಮ್ಯಾಗ್ನಸ್ ಚಾರ್ಲ್ಸನ್ ಚಿನ್ನ ಗೆದ್ದರು. ಭಾರತದವರು ಹತ್ತರ ಒಳಗೆ ಬಿಡಿ 17ರ ಒಳಗೆ ಕೂಡ ಯಾರೂ ಇರಲಿಲ್ಲ.