ಮೂಡುಬಿದಿರೆ: ಸ್ಥಳೀಯ ಮಾಜಿ ಸಚಿವ, ಮಾಜಿ ಶಾಸಕ ಅಭಯ ಚಂದ್ರ ಜೈನ್ ಅವರ ಮೂಡುಬಿದಿರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಮೂಡುಬಿದಿರೆ ಪತ್ರಕರ್ತರ ಕ್ಲಬ್ ನಲ್ಲಿ ನಡೆದ ಈ ಗೋಷ್ಠಿಯಲ್ಲಿ "ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರವರು ಗೆದ್ದರೆ ಅವರ ಮೂಲಕ ಪುರಾತತ್ವ ಇಲಾಖೆಯ ಕಾರಣ ಕೋರ್ಟಿನಿಂದ ತಡೆಹಿಡಿಯಲ್ಪಟ್ಟ ಮೂಡುಬಿದಿರೆ ಮಾರುಕಟ್ಟೆ ಪ್ರಾಂಗಣವನ್ನು ಪೂರ್ತಿಗೊಳಿಸಿ ಕೊಡಲಾಗುವುದು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯು ನಿಧಾನಗತಿಯಲ್ಲಿ ನಡೆಯುತ್ತಿದ್ದು ಅದನ್ನು ಆದಷ್ಟು ಶೀಘ್ರ 4 ಪಥದ ಹೆದ್ದಾರಿಯಾಗಿ ಪೂರ್ತಿಗೊಳಿಸಲು ಪ್ರಯತ್ನಿಸಲಾಗುವುದು."

"ಜೋಕಟ್ಟೆ ಮತ್ತು ಹಳೆಯಂಗಡಿಗಳಲ್ಲಿ ಮೇಲ್ಬಂಖವನ್ನು ನಿರ್ಮಿಸಿ ರೈಲುಗಳಿಗೆ ಹಾಗೂ ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಬೆಳುವಾಯಿಯ ನಾಗರಿಕರಿಗೆ ಲೋಕಸಭಾ ಸದಸ್ಯರು ರಸ್ತೆ ಸರಿಪಡಿಸುವ ಭರವಸೆ ಹುಸಿಯಾಗಿದ್ದು ಅದನ್ನು ಸರಿಪಡಿಸಲಾಗುವುದು."

"ನನ್ನ ಅವಧಿಯಲ್ಲಿ ಪುರಸಭೆಯಿಂದ ಗೋ ಆಸ್ಪತ್ರೆಯ ಸ್ಥಳವನ್ನು ಒದಗಿಸಿದ ಕಾರಣ ಬಹಳ ವಿಶಾಲ ಬಸ್ಸು ನಿಲ್ದಾಣ, ಈಗಿನ ಗೋ ಆಸ್ಪತ್ರೆಯ ಅರ್ಧ ಸ್ಥಳ ನ್ಯಾಯಾಲಯಕ್ಕೆ ನೀಡಿದ ಕಾರಣ ತಾಲೂಕು ಕಚೇರಿ ಸಮೀಪ ಎಲ್ಲವೂ ಇರಲು ಸಾಧ್ಯವಾಗಿದೆ" ಎಂದರು. ಪತ್ರಿಕಾಗೋಷ್ಠಿಯಲ್ಲಿ ಬೆಳುವಾಯಿ ಗ್ರಾ.ಪಂ.ಮಾಜಿ ಅಧ್ಯಕ್ಷ ರಾಘು ಪೂಜಾರಿ ಹಾಜರಿದ್ದರು.

ವರದಿ: ರಾಯಿ ರಾಜ ಕುಮಾರ್ ಮೂಡುಬಿದಿರೆ.