ಮುಂಬಯಿಯ ಕುರ್ಲಾ ಪ್ರದೇಶದ ನಾಯಕ್ ನಗರದಲ್ಲಿ ನಾಲ್ಕು ಅಂತಸ್ತಿನ ಹಳೆಯ ಕಟ್ಟಡ ನಿನ್ನೆ ತಡ ರಾತ್ರಿ ಒಂದು ಕಡೆಗೆ ವಾಲಿ ಬಹುತೇಕ ಉರುಳಿದ್ದರಿಂದ ಒಬ್ಬರು ಸತ್ತು, ಏಳು ಜನರು ಗಾಯಗೊಂಡರು. ಇನ್ನೂ 22 ಜನ ಅವಶೇಷಗಳಡಿ ಸಿಕ್ಕು ಬಿದ್ದಿದ್ದಾರೆ.

ಗಾಯಾಳುಗಳನ್ನು ಘಾಟ್‌ಕೋಪರ್, ಸಯಾನ್ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. 30ರ ಯುವಕನೊಬ್ಬ ಅಸು ನೀಗಿದ್ದಾನೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಸ್ಥಳಕ್ಕೆ ಭೇಟಿ ನೀಡಿದರು. ಪೋಲೀಸರು ಮತ್ತು ಅಗ್ನಿಶಾಮಕ ದಳದವರು ಕಟ್ಟಡದಡಿ ಸಿಕ್ಕಿ ಬಿದ್ದಿರುವ 22 ಮಂದಿಯ ರಕ್ಷಣೆಗಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.