ಬರಗೂರು ರಾಮಚಂದ್ರಪ್ಪ ಪಠ್ಯ ಪುಸ್ತಕ ಸಮಿತಿ ಇದ್ದಾಗ 27 ಸಮಿತಿ ಮತ್ತು 172 ವಿಷಯ ತಜ್ಞರಿದ್ದರು. ಈಗ ಒಂದೇ ಸಮಿತಿ ಒಬ್ಬರ ಹೊರತು ಉಳಿದವರೆಲ್ಲ ಸಂಘೀ ಬ್ರಾಹ್ಮಣರು ಎಂದು ಮಠಾಧೀಶರ ಒಕ್ಕೂಟ ಕಿವಿ ಹಿಂಡಿದ ಮೇಲೆ ಮುಖ್ಯಮಂತ್ರಿ ಅಹುದಹುದೆಂದರೆ ಶಿಕ್ಷಣ ಇಲಾಖೆ ತಪ್ಪೊಪ್ಪಿಕೊಂಡಿದೆ.
6ರಿಂದ 10ನೇ ತರಗತಿವರೆಗಿನ ಭಾಷಾ ವಿಷಯ ಮತ್ತು ಇತರ ಪಠ್ಯಗಳಲ್ಲಿ ಚಕ್ರತೀರ್ಥ ಸಮಿತಿ ತಿರುಚಿದ್ದನ್ನು ಕೈಬಿಡಲು ಶಿಕ್ಷಣ ಇಲಾಖೆಯು ಒಪ್ಪಿಕೊಂಡು ತಿದ್ದೋಲೆ ಕಳುಹಿಸಿದೆ. 2022-23ರ ಪಠ್ಯ ಈಗಾಗಲೇ ಮುದ್ರಣ ಆಗಿರುವುದರಿಂದ ತಿದ್ದೋಲೆ ಬಿಟ್ಟಿದೆ ಎನಲಾಗಿದೆ.